ಗಮನಕ್ಕೆ ಬಾರದ ಅಂಶಗಳು

7

ಗಮನಕ್ಕೆ ಬಾರದ ಅಂಶಗಳು

Published:
Updated:

ಕಾವೇರಿ ನೀರಿನ ವಿವಾದ ಗಮನಿಸಿದರೆ ಮೂಲಭೂತ ಅಂಶಗಳತ್ತ ಎರಡೂ ಪಕ್ಷಗಳವರು ಅಗತ್ಯ ಗಮನ ಹರಿಸುತ್ತಿಲ್ಲ ಎನಿಸುತ್ತದೆ.ಕಡಿಮೆ ಮಳೆ, ಜಲಾಶಯ ಸಂಗ್ರಹ ಇರುವಾಗ ಹೆಚ್ಚು ನೀರಿನ ಅಗತ್ಯವಿರುವ ಬೆಳೆಗಳನ್ನು ಎರಡೂ ರಾಜ್ಯಗಳ ರೈತರು ಕೈಗೊಳ್ಳಬಾರದು. ತಮಿಳುನಾಡಿನ ರೈತರು ಈಗಲೂ ಬತ್ತಕ್ಕೆ ಪ್ರಾಶಸ್ತ್ಯ ಕೊಡುತ್ತಿದ್ದಾರೆ. ಹಾಗೆಯೇ ಮಂಡ್ಯದ ರೈತರು ಕಬ್ಬಿನ ವಿಷವರ್ತುಲದಲ್ಲಿ ಸಿಕ್ಕಿಕೊಂಡಿದ್ದಾರೆ. ಟ್ರಿಬ್ಯುನಲ್, ಪ್ರಾಧಿಕಾರಗಳು ನೀರಿನ ಲಭ್ಯತೆ ಬಗೆಗೆ ಪ್ರಸ್ತಾಪಿಸಿದಷ್ಟು ಬೆಳೆಗಳ ಬಗ್ಗೆ ಯೋಚಿಸಿಲ್ಲ.ಬೆಂಗಳೂರು ಕೃಷಿ ವಿ.ವಿ.ದ ಉಪಕುಲಪತಿಗಳು `ಕರ್ನಾಟಕದ 6.5 ಲಕ್ಷ ಹೆಕ್ಟೇರ್ ಕಬ್ಬಿನ ಪ್ರದೇಶದಲ್ಲಿ ಕಾವೇರಿ ಜಲಾನಯನದಲ್ಲಿ 2.5 ಲಕ್ಷ ಹೆಕ್ಟೇರ್ ಕಬ್ಬಿದೆ. ಇದು ಬೇಡಿಕೆಗಿಂತ ಹೆಚ್ಚು~ ಎಂದಿದ್ದಾರೆ (ಪ್ರ. ವಾ. ಅ. 5).ಈ ದೀರ್ಘಕಾಲೀನ ಸಮಸ್ಯೆಗೆ ಪರಿಹಾರ ರೈತರ ಕೈಯಲ್ಲೂ ಇದೆ - ಎಲ್ಲಿಂದಲಾದರೂ ಪ್ರಾರಂಭಿಸಬೇಕು. ಕಾವೇರಿ ನೀರನ್ನು ಬಳಸುತ್ತಿರುವ ಕಬ್ಬು ಬೆಳೆಗಾರರು ಇಂತಿಷ್ಟು ಕ್ಷೇತ್ರ ಕಡಿಮೆ ಮಾಡುತ್ತೇವೆ ಎಂದು ನಿರ್ಧರಿಸಬೇಕು. ಹಾಗೆಯೇ ಬತ್ತ ಬೆಳೆಗಾರರು ವರ್ಷದಲ್ಲಿ ಬೆಳೆಗಳ ಸಂಖ್ಯೆ ಕಡಿಮೆ ಮಾಡಿ, ಕಡಿಮೆ ನೀರು ಬೇಡುವ ಬೆಳೆಗಳನ್ನು ಇಡಲು ತೀರ್ಮಾನಿಸಬೇಕು.`ಕಾವೇರಿ ಪರಿವಾರ~ ಈ ವರ್ಷ ಕ್ರಿಯಾಶೀಲ ಆದಂತಿಲ್ಲ. ಪ್ರತಿ ವರ್ಷ ಜುಲೈ - ಆಗಸ್ಟ್‌ಗಳಲ್ಲಿ ಹೊರ ರಾಜ್ಯದಲ್ಲಿ (ಉದಾ: ಹೈದರಾಬಾದ್) ಸಭೆ ಸೇರಿ ಒಮ್ಮತಕ್ಕೆ ಬಂದು ಸರ್ಕಾರಗಳಿಗೆ ತಿಳಿಸಬೇಕು.

ನೀರಿನ ಪಾಲನ್ನು ನಿಗದಿ ಮಾಡುವಾಗ ಬಿಡುವ ನಿರ್ಧಾರ ಕೈಗೊಳ್ಳುವಾಗ ಬೇಸಾಯ ಶಾಸ್ತ್ರಜ್ಞರ ಮಾತನ್ನೂ ಪರಿಗಣಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry