ಭಾನುವಾರ, ನವೆಂಬರ್ 17, 2019
28 °C

ಗಮನಸೆಳೆದ ಅಣಕು ನ್ಯಾಯಾಲಯ

Published:
Updated:

ಬಾಗಲಕೋಟೆ: ಜೀವನದಲ್ಲಿ ಅನುಭವ ಬಹಳ ಮುಖ್ಯವಾದದ್ದು,ಕಾನೂನು ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನಕ್ಕೆ ಅಗತ್ಯವಿರುವ ಮಾಹಿತಿ ಒದಗಿಸುವಂತಹ ಮತ್ತು ಸ್ವತಃ ಅನುಭವಿಸಲು ಅವಕಾಶ ಸಿಗುವಂತಹ ಅಣಕು ನ್ಯಾಯಾಲಯದ ಪ್ರದರ್ಶನ ಅತ್ಯಂತ ಶ್ಲಾಘನೀಯವಾಗಿದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಕಾನೂನು ಅಧಿಕಾರಿ  ವಿ.ಡಿ. ದರಬಾರೆ ಅವರು ಅಭಿಪ್ರಾಯಪಟ್ಟರು.ನಗರದ ಎಸ್.ಸಿ.ನಂದಿಮಠ ಕಾನೂನು ಮಹಾವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ  ಅಣಕು ನ್ಯಾಯಾಲಯ  ಪ್ರದರ್ಶನದ ವೀಕ್ಷಕ ರಾಗಿ ಆಗಮಿಸಿ ಮಾತನಾಡಿದರು.ವೀಕ್ಷಕರಾಗಿದ್ದ ಹಿರಿಯ ವಕೀಲ ವಿ.ಪಿ.ಗುಡಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶ ನವಿದ್ದರೆ ಏನೆಲ್ಲ ಮಾಡಬಹುದು ಎನ್ನುವುದಕ್ಕೆ ಇದು ನಿದರ್ಶನವಾಗಿದೆ ಎಂದರು.ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ನಿಜವಾದ ನ್ಯಾಯಾಲಯದ ವಾತಾವರಣವನ್ನು ನಿರ್ಮಿಸಿ, ಅನುಭವಿ ನ್ಯಾಯಾಧೀಶರು ಮತ್ತು ನ್ಯಾಯವಾದಿಗಳ ರೀತಿ ಪಾತ್ರ ನಿಭಾಯಿಸಿದ್ದಾರೆ ಎಂದು ಹೇಳಿದರು.ಸುಮಾರು 3 ಗಂಟೆಗಳ ಕಾಲ ನಡೆದ ಅಣಕು ನ್ಯಾಯಾಲಯದ ಪ್ರದರ್ಶನದಲ್ಲಿ ನ್ಯಾಯಾಧೀಶರು, ವಕೀಲರು, ಸಾಕ್ಷಿದಾರರು, ಪರಿ ಚಾರಕರು, ಮುಂತಾದ ಪಾತ್ರಗಳಲ್ಲಿ ವಿದ್ಯಾರ್ಥಿಗಳು ಮಿಂಚಿದರು.ಕಾರ್ಯಕ್ರಮದಲ್ಲಿ ಪ್ರಾಚಾರ್ಯ ವಿ.ಕೆ.ಯಂಡಿಗೇರಿ ಸೇರಿದಂತೆ ಎಲ್ಲ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)