ಗಮನಸೆಳೆದ ರಾಜ್ಯಮಟ್ಟದ ಟಗರು ಕಾಳಗ

7

ಗಮನಸೆಳೆದ ರಾಜ್ಯಮಟ್ಟದ ಟಗರು ಕಾಳಗ

Published:
Updated:

ಶಿಕಾರಿಪುರ: ಪ್ರೇಕ್ಷಕರ ಚಪ್ಪಾಳೆ ಹಾಗೂ ಸಿಳ್ಳೆಗಳ ಮಧ್ಯೆದಲ್ಲಿ ರಾಜ್ಯಮಟ್ಟದ ಟಗರು ಕಾಳಗ  ಅದ್ದೂರಿಯಾಗಿ ನಡೆಯಿತು.

ಕನಕದಾಸರ ಜಯಂತ್ಯುತ್ಸವದ ಪ್ರಯುಕ್ತ ಭಾನುವಾರ ದಿ. ನರಸಪ್ಪ ಸ್ಮಾರಕ ಬಯಲು ರಂಗಮಂದಿರದಲ್ಲಿ ಟಗರು ಕಾಳಗ ಸಮಿತಿ ಹಾಗೂ ಕನ್ನಡ ಯುವಕ ಸಂಘದಿಂದ ಸ್ಪರ್ಧೆ ಆಯೋಜಿಸಲಾಗಿತ್ತು.ಮಧ್ಯಾಹ್ನ ದೊಡ್ಡಕೇರಿ ಹಾಗೂ ಸೊಪ್ಪಿನಕೇರಿ ಭಾಗದಿಂದ ಕನಕದಾಸರ ಭಾವಚಿತ್ರ ಮೆರವಣಿಗೆ ಮೂಲಕ ಆಗಮಿಸಿದ ಸಮಿತಿಯ ಪದಾಧಿಕಾರಿಗಳು ಕನಕ ಪಾರ್ಕ್‌ನಲ್ಲಿರುವ ಕನಕ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸ್ಪರ್ಧೆಯನ್ನು ಆರಂಭಿಸಿದರು. ಶಿವಮೊಗ್ಗ ದಾವಣಗೆರೆ, ಹಾವೇರಿ ಸೇರಿದಂತೆ ಹಲವು ಜಿಲ್ಲೆಯ ಸಾವಿರಾರು ಪ್ರೇಕ್ಷಕರು ಸ್ಪರ್ಧೆಯನ್ನು ಕುತೂಹಲದಿಂದ ವೀಕ್ಷಿಸಲು ನೆರೆದಿದ್ದರು.ಸ್ಪರ್ಧೆಯಲ್ಲಿ ದಾವಣಗೆರೆ, ಹಾವೇರಿ, ಶಿವಮೊಗ್ಗ, ಹುಬ್ಬಳ್ಳಿ ಸೇರಿದಂತೆ ಹಲವು ಜಿಲ್ಲೆಗಳಿಂದ ಟಗರುಗಳು ಆಗಮಿಸಿದ್ದವು.

ಕುರುಬ ಸಮಾಜದ ಮುಖಂಡರಾದ ಜೀಕಣ್ಣ, ಗೋಣಿ ಬಸಪ್ಪ, ಗೋಣಿ ಮಾಲತೇಶ್, ಟಿ.ಎಸ್. ಮಹಾಲಿಂಗಪ್ಪ, ಕನಕ ಟಗರು ಸಮಿತಿಯ ಸಂಸ್ಥಾಪಕ ಬಡಗಿ ಮಹಾದೇವಪ್ಪ, ಗೌರವ ಅಧ್ಯಕ್ಷ ಸ.ನಾ. ಮಂಜಪ್ಪ, ಅಧ್ಯಕ್ಷ ಎಂ.ಎ. ಮಲ್ಲಪ್ಪ  ಅಡಿಕೆ, ಕನ್ನಡ ಯುವಕ ಸಂಘದ ಅಧ್ಯಕ್ಷ ಚೋರಡಿ ಗಿಡ್ಡೇಶ್, ಪಿಎಲ್‌ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಸಂದಿಮನಿ ಯೋಗೇಶ್, ತೀರ್ಪುಗಾರರಾದ ರಾಣೆಬೇನ್ನೂರು ಮುತ್ತಣ್ಣ, ಗಣೇಶ್, ಕಸಬಾ ಕನಕ ಸಹಕಾರ ಸಂಘದ ಅಧ್ಯಕ್ಷರು ನಿರ್ದೇಶಕರು, ಕಾಳಿದಾಸ ಯುವಕ ಸಂಘ ಹಾಗೂ ಕನ್ನಡ ಯುವಕ ಸಂಘದ ಮಾಜಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry