ಗಮನ ಸೆಳೆದ ವಸ್ತುಪ್ರದರ್ಶನ-ಮಾರಾಟ ಮೇಳ

7

ಗಮನ ಸೆಳೆದ ವಸ್ತುಪ್ರದರ್ಶನ-ಮಾರಾಟ ಮೇಳ

Published:
Updated:

ಬಾಗಲಕೋಟೆ: ಮಾಲಿನ್ಯ ಕಿತ್ತೊಗೆದು ಸ್ವಚ್ಛ ಪರಿಸರ ನಿರ್ಮಾಣ ಮಾಡುವುದಕ್ಕಾಗಿ ಕೇಂದ್ರ ಸರ್ಕಾರ ರೂಪಿಸಿದ ಯೋಜನೆಯಾದ ಸಂಪೂರ್ಣ ಸ್ವಚ್ಛತಾ ಆಂದೋಲನಕ್ಕೆ ಭಾನುವಾರ ನಗರದ ನವನಗರದಲ್ಲಿ ಚಾಲನೆ ನೀಡಲಾಯಿತು.ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತಿರಾಜ್ ಇಲಾಖೆ, ರಾಜ್ಯ ನೀರು ಮತ್ತು ನೈರ್ಮಲ್ಯ ಮಿಷನ್, ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಂಯುಕ್ತವಾಗಿ ಕಲಾಭವನದ ಆವರಣದಲ್ಲಿ ಏರ್ಪಡಿಸಿದ್ದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಆಕರ್ಷಕವಾಗಿತ್ತು.ಜಮಖಂಡಿ, ಬನಹಟ್ಟಿ, ಇಲಕಲ್ಲ, ಅಮೀನಗಡ, ರಾಂಪೂರ, ಮಹಾಲಿಂಗಪೂರ, ಹುಬ್ಬಳ್ಳಿ, ಬಾಗಲಕೋಟೆ ಸೇರಿದಂತೆ ವಿವಿಧ ಕಡೆಯ ಮಹಿಳೆಯರು ಉತ್ಪಾದಿಸಿದ ಹಾಗೂ ನೇಕಾರರು ಸಿದ್ದಪಡಿಸಿದ ವಸ್ತುಗಳ ಮಳಿಗೆಗಳು ಮೇಳದಲ್ಲಿ ಇದ್ದವು.ಶೇಂಗಾ ಹಿಂಡಿ, ಪುಟಾಣಿ ಹಿಂಡಿ, ಮಸಾಲಾ ಖಾರಾ, ಕಂಬಳಿ, ಕೈಮಗ್ಗದಿಂದ ನೇಯ್ದ ಬಟ್ಟೆಗಳು, ಸೀರೆಗಳು, ಚಿಕ್ಕಮಕ್ಕಳ ಆಟದ ಸಾಮಾಗ್ರಿಗಳು, ಆಯುರ್ವೇದಿಕ್ ಔಷಧ ಗಳು ಮತ್ತಿತರ ವಸ್ತುಗಳು ಮಾರಾಟಕ್ಕಿದ್ದವು.ಉದ್ಘಾಟನೆಗೆ ಆಗಮಿಸಿದ್ದ ಗ್ರಾಮೀಣಾಭಿವದ್ಧಿ ಹಾಗೂ ಪಂಚಾಯಿತಿರಾಜ್ ಸಚಿವ ಜಗದೀಶ ಶೆಟ್ಟರ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮತ್ತು ಗಣ್ಯರನ್ನು ಬನಹಟ್ಟಿಯ ಡೊಳ್ಳು ಮೇಳದವರು ಮೆರವಣಿಗೆ ಮೂಲಕ ಕಾರ್ಯಕ್ರಮದ ವೇದಿಕೆಗೆ ಕರೆತಂದರು.ಗ್ರಾಮೀಣ ಪ್ರದೇಶದಲ್ಲಿ ಬಡವರು ಎಷ್ಟು ಖರ್ಚಿನಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬಹುದು ಎಂಬುದರ ಮಾದರಿ ಶೌಚಾಲಯಗಳನ್ನು ನಿರ್ಮಿತ ಕೇಂದ್ರದವರು ಕಲಾಭವನದ ಆವರಣದಲ್ಲಿ ಸಿದ್ದಪಡಿಸಿದ್ದರು. ಸಚಿವರು ಇದನ್ನು ವೀಕ್ಷಿಸಿದರು.ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಗೋವಿಂದ ಕಾರಜೋಳ ಉದ್ಘಾಟಿಸಿದರು. ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ಜಿ.ಪಂ.ಅಧ್ಯಕ್ಷೆ ಕವಿತಾ ದಡ್ಡೇನವರ, ಉಪಾಧ್ಯಕ್ಷ ಹೂವಪ್ಪ ರಾಠೋಡ, ವಿ.ಪ.ಸದಸ್ಯರಾದ ಎಸ್.ಆರ್.ಪಾಟೀಲ, ನಾರಾಯಣಸಾ ಭಾಂಡಗೆ, ಅರುಣ ಶಹಾಪೂರ, ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ, ಸಿಇಓ ಡಾ.ಜೆ.ಸಿ.ಪ್ರಕಾಶ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ ಮತ್ತಿತರರು ಉಪಸ್ಥಿತರಿದ್ದರು.ಶೀಘ್ರ ಒಂಬುಡ್ಸಮನ್ ನೇಮಕ:ಜಗದೀಶ ಶೆಟ್ಟರಬಾಗಲಕೋಟೆ:
ಮಹಾತ್ಮಗಾಂಧಿ ರ್ಟ್ರೋಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆಯುವ ಭ್ರಷ್ಟಾಚಾರ ತಡೆಯಲು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಒಂಬುಡ್ಸಮನ್‌ಗಳನ್ನು ಶೀಘ್ರ ನೇಮಕ ಮಾಡಲಾಗುವುದು ಎಂದು ಸಚಿವ ಜಗದೀಶ ಶೆಟ್ಟರ ಹೇಳಿದರು.

  

ರಾಜ್ಯ ಮಟ್ಟದ ಸ್ವಚ್ಛತಾ ಉತ್ಸವಕ್ಕೆ ಚಾಲನೆ ನೀಡಲು ನಗರಕ್ಕೆ ಆಗಮಿಸಿದ್ದ ಅವರು, ಸುದ್ದಿಗಾರರೊಂದಿಗೆ ಮಾತ ನಾಡಿ, ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆ ಉಪಯುಕ್ತ. ಇದರಿಂದ ಹಳ್ಳಿಗಳ್ಳಲ್ಲಿ, ರೈತರ ಹೊಲಗಳಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ.ಆದರೆ ಇದು ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದ್ದು ಅದಕ್ಕಾಗಿ ಮೇಲ್ವಿಚಾರಕರನ್ನಾಗಿ ಮತ್ತು ಭ್ರಷ್ಟಾಚಾರ ನಡೆದರೆ ಸೂಕ್ತ ಕ್ರಮ ಕೈಗೊಳ್ಳಲು ನಿವೃತ್ತಿ ಜಿಲ್ಲಾ ನ್ಯಾಯಾಧೀಶರನ್ನು ಜಿಲ್ಲಾ ಮಟ್ಟದಲ್ಲಿ ಒಂಬುಡ್ಸಮನ್‌ಗಳಾಗಿ ನೇಮಕ ಮಾಡಲಾಗುತ್ತಿದೆ ಎಂದರು.ಈವರೆಗೆ ರಾಜ್ಯದ 14 ಜಿಲ್ಲೆಗಳಲ್ಲಿ ಮಾತ್ರ ಒಂಬುಡ್ಸ ಮನ್ ನೇಮಕ ಮಾಡಲಾಗಿದ್ದು, ಶೀಘ್ರದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ನೇಮಕ ಮಾಡಲಾಗುವುದು ಎಂದು ತಿಳಿಸಿದರು.ಒಂಬುಡ್ಸ್‌ಮನ್‌ಗಳ ನೇಮಕದಲ್ಲಿ ವಿಳಂಬ ಆಗುತ್ತಿದೆ. ಕಾರಣ ಜಿಲ್ಲಾ ಮಟ್ಟದ ನಿವತ್ತ ನ್ಯಾಯಾಧೀಶರು ಈ ಹುದ್ದೆಗೆ ಬರುತ್ತಿಲ್ಲ. ಆದ್ದರಿಂದ ನಿವತ್ತ ನ್ಯಾಯಾಧೀಶರು ಸೇರಿದಂತೆ ಬೇರೆ ಮಟ್ಟದ ಅಧಿಕಾರಿಯನ್ನು ನೇಮಕ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಶೀಘ್ರದಲ್ಲಿ ತೀರ್ಮಾಣ ಕೈಗೊಳ್ಳಲಾಗುವುದು ಎಂದರು.ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವ್ಯವಹಾರ ಮಾಡಿದ 300 ಜನರ ಮೇಲೆ ಈಗಾಗಲೇ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿಯಡಿ ಅವ್ಯಹಾರ ಕಂಡುಬಂದಿಲ್ಲ ತಮ್ಮ ಗಮನಕ್ಕೆ ತರಬೇಕು. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮಖಂಡನೆ: ಸಚಿವ ವಿ. ಸೋಮಣ್ಣ ಮೇಲೆ ವ್ಯಕ್ತಿಯೊಬ್ಬ ವಿಧಾನಸೌಧದಲ್ಲೆೀ ಹಲ್ಲೆ ಮಾಡಿದ್ದು ಖಂಡನಾರ್ಹ. ಏನೇ ಸಮಸ್ಯೆಗಳಿದ್ದರೂ ನೇರವಾಗಿ ಚರ್ಚಿಸಿ ಬಗೆ ಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಹಲ್ಲೆ ಮಾಡುವಂತಹ ಹೀನ ಕೃತ್ಯಕ್ಕೆ ಕೈ ಹಾಕಬಾರದು ಎಂದರು.ಮಾಜಿ ಸಚಿವ ಶ್ರೀರಾಮುಲು ಅವರ ರಾಜೀನಾಮೆ ವಿಷಯ ಸ್ಪೀಕರ್‌ಗೆ ಬಿಟ್ಟ ವಿಚಾರ. ಆದರೆ ಶ್ರೀರಾಮುಲು ಅವರು ರಾಜೀನಾಮೆ ಹಿಂದೆ ಪಡೆಯಬೇಕು ಎಂದು ಮನವಿ ಮಾಡಿದರು.ಸಚಿವ ಗೋವಿಂದ ಕಾರಜೋಳ, ಸಂಸದ ಪಿ.ಸಿ. ಗದ್ದಿನ ಗೌಡರ, ಶಾಸಕರಾದ ವೀರಣ್ಣ ಚರಂತಿಮಠ, ಎಸ್.ಆರ್. ಪಾಟೀಲ, ನಾರಾಯಣಸಾ ಬಾಂಡಗೆ, ಅರುಣ ಶಹಾಪುರ, ಜಿ.ಪಂ. ಅಧ್ಯಕ್ಷೆ ಕವಿತಾ ದಡ್ಡೇನವರ, ಉಪಾಧ್ಯಕ್ಷ ಹೂವಪ್ಪ ರಾಠೋಡ, ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ, ಸಿಇಒ ಡಾ.ಜೆ.ಸಿ. ಪ್ರಕಾಶ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry