ಗಮನ ಸೆಳೆದ ವಿಜ್ಞಾನ ವಸ್ತುಪ್ರದರ್ಶನ

7

ಗಮನ ಸೆಳೆದ ವಿಜ್ಞಾನ ವಸ್ತುಪ್ರದರ್ಶನ

Published:
Updated:

ಮಂಡ್ಯ: ಮಂಡ್ಯ ತಾಲ್ಲೂಕು ದಕ್ಷಿಣ ವಲಯ ವ್ಯಾಪ್ತಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಬುಧವಾರ ನಗರದ ಸೇಂಟ್ ಜಾನ್ಸ್ ಪ್ರೌಢಶಾಲೆಯಲ್ಲಿ ವಿಜ್ಞಾನ ಮಾದರಿಗಳ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.ಒಟ್ಟು 42 ಪ್ರೌಢಶಾಲೆಗಳಿಂದ 92 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 40ಕ್ಕೂ ಹೆಚ್ಚು ವಿಜ್ಞಾನ ಮಾದರಿಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಹಲವು ಮಾದರಿಗಳು ಗಮನ ಸೆಳೆದವು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಧಾ ರಾಮಚಂದ್ರ ಅವರು ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವು ಹಾಜರಿದ್ದರು. ಜಿಲ್ಲಾ ಮಟ್ಟದ ಸ್ಪರ್ಧೆಗೆ ಒಟ್ಟು ಆರು ತಂಡಗಳನ್ನು ಆಯ್ಕೆಯಾಗಿದ್ದು, ವಿವರ ಇಂತಿದೆ.ಫಲಿತಾಂಶ ವಿವರ: ಸಿ.ಎಸ್.ಮೇಘಾ, ಎಚ್.ವಿ.ವೈಷ್ಣವಿ (ಸ.ಪ್ರೌಢಶಾಲೆ. ಚಿಕ್ಕಮಂಡ್ಯ) -1, ಎಂ.ವಿ.ಪಲ್ಲವಿ, ಬಿ.ಆರ್. ಪ್ರಮೋದ್ (ಸ.ಪ್ರೌ.ಶಾಲೆ. ಹಳೇ ಬೂದನೂರು) -2, ಟಿ.ಎಸ್.ಮನು, ಇರ್ಷಾದ್ (ಪಿಇಎಸ್ ಪ್ರೌಢಶಾಲೆ, ಮಂಡ್ಯ) -3.ಬಿ.ನಂದೀಶ್, ಪ್ರಸಾದ್ (ಸ.ಪ್ರೌಢಶಾಲೆ. ಗುತ್ತಲು ಮಂಡ್ಯ) -4, ಪೂಜಾ, ಮೆಹರುನ್ನೀಸಾ (ಗೌಸಿಯಾ ಪ್ರೌಢಶಾಲೆ ಮಂಡ್ಯ) -5, ಅಬುತೌರಾಜ್ ರಫಿ ಮತ್ತು ಎಸ್.ನಂದೀಶ್ (ಮಾಂಡವ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮಂಡ್ಯ) -6.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry