ಶನಿವಾರ, ಆಗಸ್ಟ್ 17, 2019
27 °C

ಗಮನ ಸೆಳೆದ ಸಚಿನ್

Published:
Updated:

ನವದೆಹಲಿ (ಪಿಟಿಐ): ಸೋಮವಾರ ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಎಲ್ಲರ ಗಮನ ಸೆಳೆದರು.ನೀಲಿ ಗೆರೆಗಳುಳ್ಳ ಶರ್ಟ್, ಕಪ್ಪು ಪ್ಯಾಂಟ್ ಧರಿಸಿ ರಾಜ್ಯಸಭೆಗೆ ಆಗಮಿಸಿದ ಸಚಿನ್, ನೆರೆದವರ ಗಮನ ಸೆಳೆದರು. ನಂತರ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ರಾಜೀವ್ ಶುಕ್ಲಾ ಅವರಿಗೆ ಸಚಿನ್ ಹಸ್ತಲಾಘವ ನೀಡಿದರು.ಕುರ್ಚಿಯಲ್ಲಿ ಕುಳಿತುಕೊಳ್ಳುವ ಮುನ್ನ ಸಚಿನ್, ಕೆಲ  ಸಂಸದರಿಗೆ ಹಸ್ತಲಾಘವ ನೀಡಿದರು. ಮತ್ತೆ ಕೆಲವರು ಸಚಿನ್ ಅವರ ಬಳಿಯೇ ಬಂದು ಹಸ್ತಲಾಘವ ನೀಡಿ, ನಗೆ ಬೀರಿದರು. ನಂತರ ಸಚಿನ್ ಖ್ಯಾತ ಗೀತ ರಚನೆಕಾರ ಜಾವೇದ್ ಅಖ್ತರ್ ಅವರ ಪಕ್ಕದಲ್ಲಿ ಕುಳಿತರು.ಪತಿ ಸಚಿನ್ ಅವರ ಚಲನವಲನಗಳನ್ನು ಪತ್ನಿ ಅಂಜಲಿ ತೆಂಡೂಲ್ಕರ್ ಪ್ರೇಕ್ಷಕರ ಗ್ಯಾಲರಿಯಲ್ಲೇ ಕುಳಿತು ವೀಕ್ಷಿಸಿದರು.

Post Comments (+)