ಗುರುವಾರ , ನವೆಂಬರ್ 21, 2019
21 °C

ಗರಗ ಗ್ರಾಮದಲ್ಲಿ ಮಳೆ

Published:
Updated:

ಮರಿಯಮ್ಮನಹಳ್ಳಿ: ಸಮೀಪದ ಗರಗ ಗ್ರಾಮ ಸೇರಿದಂತೆ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಗುರುವಾರ ಮಧ್ಯಾಹ್ನ ಉತ್ತಮ ಮಳೆ ಸುರಿದಿದೆ.ಗರಗ ಗ್ರಾಮದಲ್ಲಿ ಮಧ್ಯಾಹ್ನ12ಕ್ಕೆ ಶುರುವಾದ ಮಳೆ ಸುಮಾರು ಅರ್ಧ ಗಂಟೆಗಳ ಉತ್ತಮವಾಗಿ ಸುರಿದಿದೆ. ಹಲವಾರು ದಿನಗಳಿಂದ ಬಿರು ಬಿಸಿಲಿಗೆ ತತ್ತರಿಸುತ್ತದ್ದ ಜನತೆಗೆ ಸುರಿದ ಮಳೆ ತಂಪಿನ ವಾತಾವರಣ ನಿರ್ಮಾಣ ಮಾಡಿತ್ತು.ವ್ಯಾಪ್ತಿಯಲ್ಲಿ ಬಹುತೇಕ ಕಡೆಗಳಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. ಬೆಳಿಗ್ಗೆಯಿಂದಲೇ ಏರುವ ಬಿಸಿಲಿನ ತಾಪ ಕೊಂಚ ಕಡಿಮೆಯಾಗಿದ್ದು, ಜನರು ಕೆಲಕಾಲ ನೆಮ್ಮದಿಯ ವಾತಾವರಣದಲ್ಲಿ ಇರುವಂತೆ ಮಾಡಿತ್ತು

ಪ್ರತಿಕ್ರಿಯಿಸಿ (+)