ಬುಧವಾರ, ಅಕ್ಟೋಬರ್ 16, 2019
22 °C

ಗರತಿಕೆರೆ ರಾಯರ ಮಠದಲ್ಲಿ ಲೂಟಿ

Published:
Updated:

ರಿಪ್ಪನ್‌ಪೇಟೆ (ಶಿವಮೊಗ್ಗ ಜಿಲ್ಲೆ): ಸಮೀಪದ ಗರತಿಕೆರೆಯ ಸುಪ್ರಸಿದ್ಧ ಗುರು ರಾಘವೇಂದ್ರ ಮಠದ ಮುಂಭಾಗದ ಕಿಟಕಿ ಸರಳು ಮುರಿದು ಗುರುವಾರ ಬೆಳಗಿನ ಜಾವ ಗರ್ಭಗುಡಿಯ ಒಳಹೊಕ್ಕ ದುಷ್ಕರ್ಮಿಗಳು ಬೃಂದಾವನದಲ್ಲಿ ದೇವರಿಗೆ ತೊಡಿಸಿದ ಎಲ್ಲಾ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.ರಾಯರ ಮೈ ಮೆಲೆ ಇದ್ದ 10 ಗ್ರಾಂ ನ 2 ಚಿನ್ನದ ಸರ ಸೇರಿದಂತೆ ಬೆಳ್ಳಿಯ ಗಣಪತಿ ಹಾಗೂ ರಾಯರ ಮುಖವಾಡ, 2 ಬೆಳ್ಳಿಸರ, 4 ಬೆಳ್ಳಿಯ ಪಾದುಕೆ, 2 ತಂಬಿಗೆ, 2 ತೂಗುದೀಪ, ಬೆಳ್ಳಿಯ ಶಂಖ, 6 ನೆಕ್ಲೇಸ್  ಹಾಗೂ ಸೊಂಟದ ಪಟ್ಟಿ ಸೇರಿದಂತೆ ಸುಮಾರು 3 ಕೆ.ಜಿ. ಬೆಳ್ಳಿ ಆಭರಣಗಳು ಹಾಗೂ ಕಾಣಿಕೆ ಹುಂಡಿಯ ಅಂದಾಜು ರೂ 2,500 ಸೇರಿದಂತೆ 3 ಲಕ್ಷಕ್ಕೂ ಅಧಿಕ ಬೆಲೆಯ ವಸ್ತುಗಳು ಕಳ್ಳತನವಾಗಿವೆ.ಮೊದಲು ಆಭರಣಗಳನ್ನು ದೋಚಿ ಆನಂತರ  ಕಾಣಿಕೆ ಡಬ್ಬಿ ಒಡೆಯುವಾಗ ಚಿಲ್ಲರೆಯ ಶಬ್ದಕ್ಕೆ ಮಠದ ಹಿಂಭಾಗದಲ್ಲಿ ವಾಸವಾಗಿದ್ದ ಅರ್ಚಕ ಸೀತಾರಾಮ ಭಟ್ ಎಚ್ಚರಗೊಂಡು ಹೊರಬಂದಾಗ ದುರ್ಷ್ಕಮಿಗಳು ಕಾಣಿಕೆ ಹಣದೊಂದಿಗೆ ಪರಾರಿಯಾಗಿದ್ದಾರೆ. ಈ ಕುರಿತು ಮಠದ ಕಾರ್ಯದರ್ಶಿ ಲಕ್ಷ್ಮೀನಾರಾಯಣ್ ಭಟ್ ನೀಡಿದ ದೂರಿನ ಅನ್ವಯ ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Post Comments (+)