ಗರಿಷ್ಠ ವಯೋಮಿತಿ ಹೆಚ್ಚಿಸಿ

ಭಾನುವಾರ, ಮೇ 19, 2019
34 °C

ಗರಿಷ್ಠ ವಯೋಮಿತಿ ಹೆಚ್ಚಿಸಿ

Published:
Updated:

ಜಾಗತಿಕ ಆರ್ಥಿಕ ಹಿಂಜರಿತದಿಂದಾಗಿ ಖಾಸಗಿ ವಲಯದ ಉದ್ಯಮಗಳ ಉದ್ಯೋಗ ಅವಕಾಶಗಳಲ್ಲಿ ಭಾರೀ ಕಡಿತಗಳಾಗಿವೆ.  ಜೊತೆಗೆ ಸಾವಿರಾರು ಉದ್ಯೋಗಿಗಳನ್ನು ಕಾರಣ ನೀಡದೆಯೇ ಕೆಲಸದಿಂದ ತೆಗೆದುಹಾಕಲಾಗಿದೆ.ಪ್ರತಿವರ್ಷ ಸಾವಿರಾರು ಕಾಲೇಜುಗಳು ಲಕ್ಷಾಂತರ ಪದವೀಧರರನ್ನು ಸೃಷ್ಟಿಸುತ್ತವೆ. ಆದರೆ ಅಷ್ಟೇ ಪ್ರಮಾಣದ ಉದ್ಯೋಗ ಕಲ್ಪಿಸುವ ವ್ಯವಸ್ಥೆ ಇಲ್ಲ. ಮುಖ್ಯವಾಗಿ ಗರಿಷ್ಠ ವಯೋಮಿತಿ ಎಂಬ `ಲಕ್ಷ್ಮಣರೇಖೆ” ದಾಟಿದ ಸಾವಿರಾರು ಪದವೀಧರರು ಅವಕಾಶ ವಂಚಿತರಾಗಿ ನಿರುದ್ಯೋಗಿಗಳಾಗಿ ಕುಳಿತಿದ್ದಾರೆ.

 

ಖಾಸಗಿ ವಲಯದ ಉದ್ಯಮಗಳಲ್ಲಿ ಕನಿಷ್ಠ ವಯಸ್ಸಿನ ಅಭ್ಯರ್ಥಿಗಳಿಗೇ ಮೊದಲ ಆದ್ಯತೆ ಮತ್ತು ಅವಕಾಶ. ಇದರಿಂದಾಗಿ ಸರ್ಕಾರಿ ಮತ್ತು ಖಾಸಗಿ ಎರಡೂ ವಿಭಾಗದಲ್ಲಿ ಈ ಗರಿಷ್ಠ ವಯೋಮಿತಿ ಮೀರಿದ ಪದವೀಧರರನ್ನು ಅಸ್ಪೃಶ್ಯರಂತೆ ಕಾಣಲಾಗುತ್ತಿದೆ.ಆದ್ದರಿಂದ ಕರ್ನಾಟಕ ಸರ್ಕಾರವಾದರೂ ಈ ಗರಿಷ್ಠ ವಯೋಮಿತಿ ಎಂಬ ತೊಡಕನ್ನು ನಿವಾರಿಸಿ ಉದ್ಯೋಗ ಎಂಬುದು ಬರೀ “ಕನಸು” ಎಂದು ಹತಾಶರಾಗಿ ಕುಳಿತ ಲಕ್ಷಾಂತರ ನಿರುದ್ಯೋಗಿ ಪದವೀಧರರಿಗೆ “ಆಶಾಕಿರಣ”ವಾಗಬಲ್ಲುದೇ?

-

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry