ಗರುಡನಗಿರಿ ನಾಗರಾಜ್‌ಗೆ ಟಿಎಸ್ಸಾರ್ ಪ್ರಶಸ್ತಿ

7

ಗರುಡನಗಿರಿ ನಾಗರಾಜ್‌ಗೆ ಟಿಎಸ್ಸಾರ್ ಪ್ರಶಸ್ತಿ

Published:
Updated:
ಗರುಡನಗಿರಿ ನಾಗರಾಜ್‌ಗೆ ಟಿಎಸ್ಸಾರ್ ಪ್ರಶಸ್ತಿ

ಬೆಂಗಳೂರು: ಹಿರಿಯ ಪತ್ರಕರ್ತ ಗರುಡನಗಿರಿ ನಾಗರಾಜ್ ಅವರು 2011ನೇ ಸಾಲಿನ `ಟಿಎಸ್ಸಾರ್ ಪ್ರಶಸ್ತಿ~ಗೆ ಹಾಗೂ ಬೆಳಗಾವಿಯ ಲೋಕದರ್ಶನ ಪತ್ರಿಕೆಯ ಸಂಪಾದಕ ಎಂ.ಬಿ.ದೇಸಾಯಿ ಅವರು ಮೊಹರೆ ಹಣಮಂತರಾಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಈ ಎರಡು ಪ್ರಶಸ್ತಿಗಳು ತಲಾ ಒಂದು ಲಕ್ಷ ರೂಪಾಯಿ ನಗದು ಬಹುಮಾನ ಒಳಗೊಂಡಿವೆ. ನಾಗರಾಜ್ ಅವರು ಕನ್ನಡಪ್ರಭ, ಕರ್ಮವೀರ ಮೊದಲಾದ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಪತ್ರಿಕಾ ಅಕಾಡೆಮಿಯ ಅಧ್ಯಕ್ಷರೂ ಆಗಿದ್ದರು.2010 ಮತ್ತು 2011ನೇ ಸಾಲಿನ ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳನ್ನೂ ಸರ್ಕಾರ ಪ್ರಕಟಿಸಿದೆ. `ಪ್ರಜಾವಾಣಿ~ಯ ಮೈಸೂರು ಬ್ಯೂರೊ ಮುಖ್ಯಸ್ಥ ರವೀಂದ್ರ ಭಟ್ಟ (2011) ಮತ್ತು ಸಂಯುಕ್ತ ಕರ್ನಾಟಕದ ಸಹ ಸಂಪಾದಕ ಕೆ.ವಿ.ಪರಮೇಶ್ (2010) ಅವರಿಗೆ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ದೊರೆತಿದೆ. ಪುತ್ತೂರಿನ ಅಡಿಕೆ ಪತ್ರಿಕೆಯ ಸಂಪಾದಕ ನಾರಾಯಣ ಕಾರಂತ ಪೆರಾಜೆ (2010) ಮತ್ತು ವಿಜಯವಾಣಿ ಪತ್ರಿಕೆಯ ಮಡಿಕೇರಿಯ ಹಿರಿಯ ವರದಿಗಾರ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರಿಗೆ 2011ನೇ ಸಾಲಿನ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ನೀಡಲಾಗಿದೆ. ಅಭಿವೃದ್ಧಿ ಮತ್ತು ಪರಿಸರ ಪ್ರಶಸ್ತಿಗಳು ತಲಾ 50 ಸಾವಿರ ರೂಪಾಯಿ ನಗದು ಬಹುಮಾನ ಒಳಗೊಂಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry