ಗರುಡಾ ಮಾಲ್‌ನಲ್ಲಿ ಟಾಮಿ ಹಿಲ್‌ಫಿಗರ್

7

ಗರುಡಾ ಮಾಲ್‌ನಲ್ಲಿ ಟಾಮಿ ಹಿಲ್‌ಫಿಗರ್

Published:
Updated:
ಗರುಡಾ ಮಾಲ್‌ನಲ್ಲಿ ಟಾಮಿ ಹಿಲ್‌ಫಿಗರ್

ಮಕ್ಕಳ ಉಡುಪುಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಟಾಮಿ ಹಿಲ್‌ಫಿಗರ್ ತನ್ನ ಮೊಟ್ಟ ಮೊದಲ ಮಳಿಗೆಯನ್ನು ಗರುಡಾ ಮಾಲ್‌ನಲ್ಲಿ ತೆರೆದಿದೆ. ರಿಯಲ್ ಸ್ಟಾರ್ ಉಪೇಂದ್ರ ಮತ್ತು ಅವರ ಕುಟುಂಬ ವರ್ಗ ಈ ಉಡುಪುಗಳನ್ನು ತೊಡುವ ಮೂಲಕ ಮಳಿಗೆಯನ್ನು ಅನಾವರಣಗೊಳಿಸಿದರು.ಉಪೇಂದ್ರ ಅವರು ಮಿಲ್ಟೆಡ್ ಟೋನ್‌ಗಳಲ್ಲಿನ ಪ್ರೆಪ್ಪಿ ಚೆಕ್ಸ್‌ನ ಶರ್ಟ್, ಕ್ಲಾಸಿಕ್ ಚಿನೋಸ್ ಮತ್ತು ಆರ್ಮಿ ಗ್ರೀನ್ ಬಣ್ಣದ ಲೋಫೆರ್ಸ್‌ ಧರಿಸಿ ಮಿಂಚಿದರು. ಪ್ರಿಯಾಂಕ ಉಪೇಂದ್ರ ಅವರು, ಉಪೇಂದ್ರ ಅವರ ದಿರಿಸಿಗೆ ಹೊಂದುವಂತೆ ಓಲಿವ್ ಪ್ಯಾಲೆಟ್‌ನ ಔಟ್‌ಫಿಟ್, ಬ್ರೌನ್ ಜ್ಯಾಕ್ವಾರ್ ಮಾಡಿದ ಟೋಟ್ ಮತ್ತು ರಾಫಿಯಾ ವೆಡ್ಜ್ ಧರಿಸಿದ್ದರು.ಮಗಳು ಐಶ್ವರ್ಯಾ, ಸನ್‌ಶೈನ್ ಯಲ್ಲೋ ಮತ್ತು ಬಿಳಿ ಬಣ್ಣದ ಸಮ್ಮರ್ ಸನ್‌ಡ್ರೆಸ್ ಧರಿಸಿದರೆ, ಪುತ್ರ ಆಯುಶ್, ಡಬಲ್ ಪಾಕೆಟ್ ಶರ್ಟ್, ಎಲ್ಲೋ ಟೈ ಮತ್ತು ಕಮೋಫ್ಲಾಗ್ ಶಾಟ್ಸ್ ಹಾಕಿಕೊಂಡು ಗಮನಸೆಳೆದ. ಬೇಸಿಗೆ ಮತ್ತು ಚಳಿಗಾಲದ ಮಕ್ಕಳ ಉಡುಪುಗಳ ಸಂಗ್ರಹವನ್ನು ಬಿಡುಗಡೆಗೊಳಿಸಿ ಮಾತನಾಡಿದ ನಟ ಉಪೇಂದ್ರ, `ಟಾಮಿ ಹಿಲ್‌ಫಿಗರ್ ಮಳಿಗೆ  ಆರಂಭಿಸುತ್ತಿರುವುದು ಒಬ್ಬ ಪೋಷಕನಾಗಿ ನನಗೆ ಖುಷಿ ಕೊಟ್ಟಿದೆ. ಚಳಿಗಾಲ ಹಾಗೂ ಬೇಸಿಗೆ ಸಂಗ್ರಹವು ಅದ್ಬುತವಾಗಿದ್ದು, ಟಾಮಿ ಹಿಲ್‌ಫಿಗರ್‌ನ ಕ್ಲಾಸಿಕ್ ಸ್ಟೈಲ್‌ಗಳು ವಿಭಿನ್ನವಾಗಿದೆ~ ಎಂದರು.                           

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry