ಗರ್ಭಪಾತ ಜಿಜ್ಞಾಸೆ

7

ಗರ್ಭಪಾತ ಜಿಜ್ಞಾಸೆ

Published:
Updated:

ಪ್ರಜಾವಾಣಿಯಲ್ಲಿ `ಗರ್ಭಪಾತ: ಸತ್ಯ - ಮಿಥ್ಯೆ' ಎಂಬ ವಿಚಾರ ಚರ್ಚೆ ಪ್ರಕಟವಾಗಿದೆ. ಅನೇಕರು ಸಾಮಾನ್ಯವಾಗಿ `ಮತ' ಎಂದು ಹೇಳುವ ಕಡೆ `ಧರ್ಮ' ಎಂಬ ಶಬ್ದ ಪ್ರಯೋಗಿಸುತ್ತಾರೆ. ಬೇರೆ ಶಬ್ದದ ಅಭಾವ ಎಂಬ ಭಾವನೆಯೂ ಇದೆ. ಕೆಲವು ಸಲ `ಧರ್ಮ ನಿರಪೇಕ್ಷ ಸಂವಿಧಾನ', `ಧರ್ಮಾಂಧತೆ', `ಧರ್ಮಸ್ಥಾಪಕ' ಎಂಬ ಮಾತಿನ ಪ್ರಯೋಗ ತುಂಬಾ ನೋವನ್ನು ಉಂಟು ಮಾಡುತ್ತದೆ.

ಇನ್ನೊಂದು ಅಂಶವೂ ಇರುವಂತೆ ತೋರುತ್ತದೆ. ಭಾರತದಲ್ಲಿ ಬಹುತೇಕ ಜನರು `ಮತ' ಎಂಬ ಶಬ್ದಕ್ಕೆ `ಜಾತಿ' ಎಂಬ ಅರ್ಥವನ್ನು ಕೊಟ್ಟಿದ್ದಾರೆ. `ಮತ' ಎಂಬುದಕ್ಕೆ ಅನೇಕ ಅರ್ಥಗಳಿವೆಯಾದ್ದರಿಂದ `ರಿಲಿಜನ್' ಶಬ್ದಕ್ಕೆ `ಧರ್ಮ' ಎನ್ನುತ್ತೇವೆ ಎಂದು ವಾದಿಸುವವರೂ ಇದ್ದಾರೆ. ಶಬ್ದಕ್ಕೆ ಸಾಂದರ್ಭಿಕ ಅರ್ಥಗಳೂ ಇರುತ್ತವೆ ಎಂಬುದನ್ನು ಮರೆಯಬಾರದು.

ಸರಳ ಸೂತ್ರದ ಪ್ರಕಾರ, `ಮತ'ಗಳನ್ನು ಮಹಾನ್ ವ್ಯಕ್ತಿಗಳು ಸೂಚಿಸುತ್ತಾರೆ. ಅವರ ಅನುಯಾಯಿಗಳು ಆ ಮಹಾನ್ ವ್ಯಕ್ತಿಯು ಸತ್ತ ನಂತರ (ಬದುಕಿದ್ದರೂ), ಆತನ ಹೆಸರಿನಲ್ಲಿ ಮತಸ್ಥಾಪನೆ ಮಾಡಿ ಆ ಮಹಾನ್ ವ್ಯಕ್ತಿಯನ್ನು ಮತ ಸ್ಥಾಪಕ ಎಂದು ಕರೆಯುತ್ತಾರೆ. ಆದರೆ `ಧರ್ಮ' ಎನ್ನುವುದನ್ನು ಇಂಥ ವ್ಯಕ್ತಿ ಸ್ಥಾಪಿಸಿದರು ಎಂದು ಯಾರೂ ಹೇಳುವುದಿಲ್ಲ.

`ಧರ್ಮ' ಎನ್ನುವುದು ನೀರು, ಗಾಳಿ, ಬಿಸಿಲು ಇರುವ ಹಾಗೆ ಇರುತ್ತದೆ. ಜಗತ್ತಿನಲ್ಲಿ ಜೀವರಾಶಿ ಬದುಕಲು, ಶಾಂತಿಯಿಂದ ಇರಲು ಯಾವ ಮೂಲಭೂತ ತತ್ತ್ವಗಳು ಇವೆಯೋ ಅವೆಲ್ಲದರ ಮೊತ್ತವೇ `ಧರ್ಮ' ಇದು ವಿಶ್ವಕ್ಕೆಲ್ಲವೂ ಸಮಾನವಾದುದು.ಪ್ರಪಂಚದ ಮತಗಳಲ್ಲಿ `ಮತಾನುಯಾಯಿಗಳು', `ಮತ ನಿಷ್ಠ'ರು ಮತ್ತು `ಮತಾಂಧರು' ಮೂರು ವರ್ಗದವರೂ ಇರುತ್ತಾರೆ. `ಮತಾನುಯಾಯಿಗಳು' ನಿರಪಾಯಕಾರಿಗಳು. ಮತ ನಿಷ್ಠರು ಕೊಂಚ ಅಪಾಯಕಾರಿಗಳು, ಮತಾಂಧರು ಜೀವಕುಲಕ್ಕೇ ಕಂಟಕರು, ಇವರಿಂದ `ಧರ್ಮ'ದ ಹೆಸರಿಗೆ ಕಳಂಕ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry