ಗರ್ಭಿಣಿಯರಿಗೆ ಪಥ್ಯ ಅಪಥ್ಯವಲ್ಲ...!

7

ಗರ್ಭಿಣಿಯರಿಗೆ ಪಥ್ಯ ಅಪಥ್ಯವಲ್ಲ...!

Published:
Updated:

ಲಂಡನ್ (ಪಿಟಿಐ): ಗರ್ಭಧಾರಣೆಯ ಅವಧಿಯಲ್ಲಿ ಪಥ್ಯ ಮಾಡಬಾರದು ಎಂದು ಸಾಮಾನ್ಯವಾಗಿ ವೈದ್ಯರು ಹೇಳುತ್ತಾರೆ. ಆದರೆ, ಬ್ರಿಟನ್‌ನ ವೈದ್ಯಕೀಯ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನವೊಂದು ಗರ್ಭಿಣಿಯರು ಪಥ್ಯ ಮಾಡುವುದರಿಂದ ಮಗುವಿಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ಹೇಳಿದೆ.

ಲಂಡನ್‌ನ ಕ್ವೀನ್ ಮೇರಿ ವಿಶ್ವವಿದ್ಯಾಲಯದ ಸಂಶೋಧಕರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಅಭಿಪ್ರಾಯಕ್ಕೆ ಬರುವ ಮುನ್ನ 7,000 ಮಹಿಳೆಯರು ಭಾಗಿಯಾಗಿದ್ದ 44 ಅಧ್ಯಯನ ವರದಿಗಳನ್ನು ಅವರು ಪರಿಶೀಲಿಸಿದ್ದರು.

`ಗರ್ಭಿಣಿಯರು ಅತಿಯಾಗಿ ತೂಕ ಗಳಿಸುವುದರಿಂದ ಆರೋಗ್ಯ ಸಂಬಂಧಿ ಸಮಸ್ಯೆಗಳು ಉದ್ಭವಿಸುತ್ತವೆ. ಆದರೆ, ಗರ್ಭಧಾರಣೆಯ ಅವಧಿಯಲ್ಲಿ ತೂಕ ನಿರ್ವಹಣೆ ಕಷ್ಟಸಾಧ್ಯ ಎಂಬ ನಂಬಿಕೆಯಿದೆ. ಗರ್ಭಿಣಿಯರು ಪಥ್ಯ ಮಾಡುವುದರಿಂದ ಮಗುವಿಗೆ ಹಾನಿಯಾಗುವುದಿಲ್ಲ ಎಂಬುದು ಈಗ ತಿಳಿದುಬಂದಿರುವುದರಿಂದ, ಸ್ವಲ್ಪವೇ ಪಥ್ಯ ಮಾಡುವುದರಿಂದ ತೂಕ ಹೆಚ್ಚದಂತೆ ನೋಡಿಕೊಳ್ಳಬಹುದು.~ ಎಂದು ಅಧ್ಯಯನ ತಂಡದ ನೇತೃತ್ವ ವಹಿಸಿದ್ದ ಡಾ. ಶಕೀಲಾ ತಂಗರತ್ನಿಮ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry