ಗರ್ಭಿಣಿಯರ ಆರೋಗ್ಯ ತಪಾಸಣೆ

7

ಗರ್ಭಿಣಿಯರ ಆರೋಗ್ಯ ತಪಾಸಣೆ

Published:
Updated:

ಸೇಡಂ: ಸಮಸ್ಯಾರಹಿತ ಹೆರಿಗೆ ಮತ್ತು ಆರೋಗ್ಯವಂತ ಮಗುವಿನ ಜನನಕ್ಕಾಗಿ ಕಾಲ ಕಾಲಕ್ಕೆ ತಪಾಸಣೆ, ತಜ್ಞ ವೈದ್ಯರ ಸಲಹೆ ಮತ್ತು ಚಿಕಿತ್ಸೆ ಅಗತ್ಯವಿದೆ ಎಂದು ಸ್ತ್ರೀರೋಗ ತಜ್ಞ ಡಾ. ಶಾಂತವೀರ ಬಿ. ಸುಂಕದ ತಿಳಿಸಿದರು.ಅವರು ಶುಕ್ರವಾರ ಮತಕ್ಷೇತ್ರದ ನಿಡಗುಂದ ಗ್ರಾಮದಲ್ಲಿ ಆರೋಗ್ಯ ಇಲಾಖೆ ಮತ್ತು ‘ಶ್ರೀ ಶರಣಂ ಅಯ್ಯಪ್ಪ ವೃದ್ಧಾಶ್ರಮ ಸೇವಾ ಕೇಂದ್ರ’ ಶುಕ್ರವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.155 ಮಹಿಳೆಯರನ್ನು ತಪಾಸಣೆ ಮಾಡಿ 55 ಗರ್ಭಿಣಿಯರಿಗೆ ಸುಸೂತ್ರ ಹೆರಿಗೆ ಮತ್ತು ಆರೋಗ್ಯವಂತ ಮಗುವಿನ ಜನನ ಕುರಿತು ತಿಳಿ ಹೇಳಿ ಉಚಿತ ಔಷಧಿಗಳನ್ನು ವಿತರಿಸಿದರು.

ಬಿಜೆಪಿ ಮುಖಂಡ ರಾಜಕುಮಾರ ಪಾಟೀಲ ತೆಲ್ಕೂರ ಶಿಬಿರವನ್ನು ಉದ್ಘಾಟಿಸಿ ಗ್ರಾಮದ ವೃದ್ದಾಶ್ರಮ ಸೇವಾ ಕೇಂದ್ರದ ಕಾರ್ಯವನ್ನು ಶ್ಲಾಘಿಸಿ ಎಲ್ಲರೂ ಹಿರಿಯರನ್ನು ಮನೆಯಲ್ಲಿ ಗೌರವಿಸಿ ಅವರ ಆಗು ಹೋಗುಗಳಿಗೆ ವಿಶೇಷ ಗಮನ ನೀಡಲು ಮನವಿ ಮಾಡಿದರು. ಜೆಡಿಎಸ್ ಮುಖಂಡ ಮುಕ್ರಂಖಾನ ಮಾತನಾಡಿದರು.ಸೇವಾ ಕೇಂದ್ರದ ಸೋಮನಾಥ ಶಂಕರ, ದೇವಿಂದ್ರಪ್ಪ ಶಂಕರ ಇದ್ದರು. ಜಿ.ಪಂ. ನೂತನ ಸದಸ್ಯೆ ಮಂದಾಕಿನಿ ಸುಭಾಶ್ಚಂದ್ರ ನಿಷ್ಠಿ, ಹಜ್ ಯಾತ್ರೆಗೆ ಹೋಗಿ ಬಂದ ಎಸ್.ಎಂ. ಖಾದ್ರಿ ಅವರನ್ನು ಸನ್ಮಾನಿಸಲಾಯಿತು. ಬಸವರಾಜ ಬೆಡಕಪಳ್ಳಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಛತ್ರೆ ನಿರೂಪಿಸಿದರು. ಶಿವಶರಣಪ್ಪ ಶಂಕರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry