ಗರ್ಭಿಣಿಯರ ಕಾಲ್‌ಸೆಂಟರ್: ಕೋಟಿ ತಲುಪಿದ ನೋಂದಣಿ

7

ಗರ್ಭಿಣಿಯರ ಕಾಲ್‌ಸೆಂಟರ್: ಕೋಟಿ ತಲುಪಿದ ನೋಂದಣಿ

Published:
Updated:

ನವದೆಹಲಿ: ಗರ್ಭಿಣಿ ಮತ್ತು ನವಜಾತ ಶಿಶುವಿನ ಆರೋಗ್ಯದ ಕಾಳಜಿಗಾಗಿ ಕೇಂದ್ರ ಆರೋಗ್ಯ ಇಲಾಖೆ ಸ್ಥಾಪಿಸಿರುವ ಕಾಲ್ ಸೆಂಟರ್‌ನಲ್ಲಿ ಒಂದು ವರ್ಷದ ಅವಧಿಯಲ್ಲಿ ಒಂದು ಕೋಟಿ ಗರ್ಭಿಣಿಯರು ಆನ್‌ಲೈನ್ ಮೂಲಕ ಹೆಸರು ನೋಂದಾಯಿಸಿ ದಾಖಲೆ ಸೃಷ್ಟಿಸಿದ್ದಾರೆ.ಗರ್ಭಿಣಿಯರು ಮತ್ತು ನವಜಾತ ಶಿಶು ಆರೋಗ್ಯ ಕಾಳಜಿ ಬಗ್ಗೆ ರಾಜ್ಯ ಸರ್ಕಾರಗಳಿಂದ ಸೂಕ್ತ ಮಾಹಿತಿ ದೊರಕದ ಕಾರಣ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಾಲ್ ಸೆಂಟರ್ ಆರಂಭಿಸಲಾಗಿತ್ತು.ಈ ಸೇವೆಗೆ ಕಳೆದ 28ರಂದು ನೋಂದಾಯಿಸಿದವರ ಸಂಖ್ಯೆ ಒಂದು ಕೋಟಿಗೆ ತಲುಪಿದೆ.ಮಹಿಳೆ ಗರ್ಭ ಧರಿಸಿರುವುದು ಖಚಿತಾದ ದಿನದಿಂದ ಹಿಡಿದು ಪ್ರಸವವಾಗಿ 42 ದಿನಗಳವರೆಗೆ ಕಾಲ್‌ಸೆಂಟರ್,ಆರೋಗ್ಯ ಕೇಂದ್ರಗಳ ಮೂಲಕ ಮಹಿಳೆಯರ ಮತ್ತು ನವಜಾತ ಶಿಶುವಿಗೆ ನೀಡಲಾಗುತ್ತಿರುವ ಚಿಕಿತ್ಸೆಯ ವಿವರ ಪಡೆದುಕೊಳ್ಳುತ್ತದೆ.ಕೆಲವು ರಾಜ್ಯಗಳು ಗರ್ಭಿಣಿ ಮತ್ತು ಮಕ್ಕಳಿಗೆ ನೀಡುತ್ತಿರುವ ಚಿಕಿತ್ಸೆಯ ಬಗ್ಗೆ ಅವಾಸ್ತವಿಕ ವರದಿ ನೀಡುತ್ತಿದ್ದವು ಹಾಗೂ ಈ ರಾಜ್ಯಗಳಲ್ಲಿ ಗರ್ಭಿಣಿ ಮತ್ತು ನವಜಾತ ಶಿಶುವಿನ ಸಾವಿನ ಸಂಖ್ಯೆ ಜಾಸ್ತಿ ಇತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆಯು ಇ- ಆಡಳಿತದ ನೆರವಿನಿಂದ ಕಾಲ್‌ಸೆಂಟರ್ ಆರಂಭಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry