ಗಲಭೆ: ರ‌್ಯಾಲಿ ಸಂಘಟಕನ ಬಂಧನ

7

ಗಲಭೆ: ರ‌್ಯಾಲಿ ಸಂಘಟಕನ ಬಂಧನ

Published:
Updated:

ಮುಂಬೈ (ಪಿಟಿಐ): ಕಳೆದ ಆಗಸ್ಟ್‌ನಲ್ಲಿ ಸಂಭವಿಸಿದ ಆಜಾದ್ ಮೈದಾನ ಗಲಭೆಗೆ ಸಂಬಂಧಿಸಿದಂತೆ ರ‌್ಯಾಲಿಯನ್ನು ಸಂಘಟಿಸಿದ್ದ ಪ್ರಮುಖನನ್ನು ಪೊಲೀಸರು ಬಂಧಿಸಿ, ಮಂಗಳವಾರ ನ್ಯಾಯಾಲಯದ ಎದುರು ಹಾಜರುಪಡಿಸಿದ್ದಾರೆ.ಮದೀನತ್ತುಲ್‌ಲ್ ಇಲ್ಮ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯ ಕಾರ್ಯದರ್ಶಿ ಮೌಲಾನ ಅಹಮ್ಮದ್ ರಜಾ ಬಂಧಿತನಾಗಿದ್ದು, ಈತನ ವಿರುದ್ಧ ಕೊಲೆ, ಒಳಸಂಚು, ಕಾನೂನಿಗೆ ವಿರುದ್ಧವಾದ ರ‌್ಯಾಲಿ ಸಂಘಟಿಸಿ ಖಾಸಗಿ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ನಾಶಗೊಳಿಸಿದ ಆರೋಪ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry