ಶುಕ್ರವಾರ, ಮೇ 7, 2021
27 °C

ಗಲ್ಲು ಶಿಕ್ಷೆ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂಡಿಗಡ: ಪಾಕ್ ಪ್ರಜೆಯೊಬ್ಬನನ್ನು ಕೊಲೆ ಮಾಡಿ ಮರಣದಂಡನೆ ಎದುರಿಸುತ್ತಿದ್ದ 17 ಮಂದಿ ಭಾರತೀಯರ ಪರವಾಗಿ ಮೃತನ ಕುಟುಂಬಕ್ಕೆ ಪರಿಹಾರ ಹಣ ನೀಡಿದ ಹಿನ್ನೆಲೆಯಲ್ಲಿ ಅವರೆಲ್ಲರೂ ಶಿಕ್ಷೆಯಿಂದ ಬಚಾವಾಗಿದ್ದಾರೆ.ಆದರೆ ಆರೋಪಿಗಳು 2 ವರ್ಷದ ಜೈಲು ಶಿಕ್ಷೆ ಅನುಭವಿಸಬೇಕಿದೆ. ಈಗಾಗಲೇ ಒಂದೂವರೆ ವರ್ಷಗಳನ್ನು ಜೈಲಿನಲ್ಲಿ ಕಳೆದಿರುವುದರಿಂದ ಕೋರ್ಟ್‌ಗೆ  ಅಗತ್ಯ ಇರುವ ದಾಖಲೆ ಪತ್ರಗಳನ್ನು ಒದಗಿಸಿದ ನಂತರ ಅವರೆಲ್ಲರೂ ಕೆಲವೇ ತಿಂಗಳುಗಳಲ್ಲಿ ಬಿಡುಗಡೆ ಆಗಲಿದ್ದಾರೆ.20-27 ವಯೋಮಾನದ ಯುವಕರನ್ನು 2009ರ ಜನವರಿ ತಿಂಗಳಿನಲ್ಲಿ ಪಾಕಿಸ್ತಾನದ ಪ್ರಜೆ ಮುಶೀರ್ ಖಾನ್ ಎಂಬಾತನ ಕೊಲೆ ಪ್ರಕರಣದಲ್ಲಿ ಬಂಧಿಸಿ ನ್ಯಾಯಾಲಯಲ್ಲಿ ಹಾಜರು ಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು.ಪಂಜಾಬ್‌ನ ಅನಿವಾಸಿ ಭಾರತೀಯರೊಬ್ಬರು ಮತ್ತು ದುಬೈನ ಹೋಟೆಲ್ ಉದ್ಯಮಿ ಎಸ್‌ಪಿಎಸ್ ಒಬೆರಾಯ್ ಅವರು ಮೃತನ ಕುಟುಂಬಕ್ಕೆ ಪರಿಹಾರ ಹಣ ನೀಡಲು ಮುಂದಾಗಿ ಎಂಟು ಕೋಟಿ ಪಾಕಿಸ್ತಾನ ರೂಪಾಯಿಗಳನ್ನು ನೀಡಿದ ನಂತರ ನ್ಯಾಯಾಲಯ ಮರಣದಂಡನೆ ಶಿಕ್ಷೆಯನ್ನು ರದ್ದು ಪಡಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.