ಗುರುವಾರ , ಫೆಬ್ರವರಿ 25, 2021
24 °C

ಗಳಿಕೆಯ ಹಳಿ ಮೇಲೆ ...ಬಚ್ಚನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಳಿಕೆಯ ಹಳಿ ಮೇಲೆ ...ಬಚ್ಚನ್

ರೋಹಿತ್ ಶೆಟ್ಟಿ ನಿರ್ದೇಶನದ ಆ್ಯಕ್ಷನ್, ಕಾಮಿಡಿ ಸಿನಿಮಾ `ಬೋಲ್ ಬಚ್ಚನ್~ ಚಿತ್ರ 50 ಕೋಟಿ ಗಳಿಕೆ ದಾಟಿದೆಯಂತೆ.ಗೋಲ್‌ಮಾಲ್ ಚಿತ್ರದಿಂದ ಪ್ರೇರಣೆಗೊಂಡು ತಯಾರರಾದದ್ದು ಬೋಲ್‌ಬಚ್ಚನ್.ಚಿತ್ರದ ಬಜೆಟ್ 70 ಕೋಟಿ. ಅಭಿಷೇಕ್ ಬಚ್ಚನ್, ಅಜಯ್ ದೇವಗನ್, ಆಸಿನ್ ಹಾಗೂ ಪ್ರಾಚಿ ದೇಸಾಯ್ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದರು.ಬೋಲ್ ಬಚ್ಚನ್ ಚಿತ್ರದ ಮೊದಲ ದಿನದ ಕಲೆಕ್ಷನ್ ರೂ.12.10 ಕೋಟಿ.ಒಂದು ವಾರದ ಗಳಿಕೆ ರೂ. 43.10 ಕೋಟಿ. ಬೋಲ್ ಬಚ್ಚನ್ ಚಿತ್ರ ಬಿಡುಗಡೆಯಾದ ಎಲ್ಲ ಚಿತ್ರಮಂದಿರಗಳಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ವಾರಾಂತ್ಯದಲ್ಲಂತೂ ಭರ್ಜರಿ ಕಲೆಕ್ಷನ್. ಇದು ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆದಿದೆ.ದೆಹಲಿ ಹಾಗೂ ಉತ್ತರ ಪ್ರದೇಶದಲ್ಲಿ ರೂ.7.80 ಕೋಟಿ ಹಾಗೂ ಪಂಜಾಬ್‌ನಲ್ಲಿ ರೂ. 3 ಕೋಟಿ ಮೊದಲ ಮೂರು ದಿನದ ಕಲೆಕ್ಷನ್. ಎಲ್ಲರೂ ಈ ಚಿತ್ರ ವೀಕ್ಷಣೆಗೆ ಕುಟುಂಬ ಸಮೇತರಾಗಿ ಆಗಮಿಸುತ್ತಿದ್ದಾರೆ ಎನ್ನುತ್ತಾರೆ ವಿತರಕ ಮಹಾಜನ್.ಅಂದಹಾಗೆ, ಬೋಲ್ ಬಚ್ಚನ್ ಬ್ರಿಟನ್, ಮಿಡಲ್ ಈಸ್ಟ್ ಹಾಗೂ ಆಸ್ಟ್ರೇಲಿಯಾದಲ್ಲೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆಯಂತೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.