ಬುಧವಾರ, ಅಕ್ಟೋಬರ್ 16, 2019
27 °C

ಗಾಂಜಾ ಮಾರಾಟ: ಮೂವರ ಬಂಧನ

Published:
Updated:

ಬೆಳಗಾವಿ: ತಾಲ್ಲೂಕಿನ ಸಾಂಬ್ರಾ ಬಳಿ ಶುಕ್ರವಾರ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, 10.30 ಲಕ್ಷ ರೂ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿಯ ಸಂಜು ಜಿ. ತಿಕೋಟಾ, ಜಮಖಂಡಿ ತಾಲ್ಲೂಕಿನ ಬಸಯ್ಯ ಎಸ್. ಅರಗುಂಡಿ ಹಾಗೂ ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಸಂಶಿ ಗ್ರಾಮದ ಉದಯಕುಮಾರ ಎಸ್.ದಾನಣ್ಣವರ ಅವರನ್ನು ಬಂಧಿಸಲಾಗಿದೆ.ಬೆಳಗಾವಿಯ ಸಾಂಬ್ರಾ ರಸ್ತೆಯ ಮಾರುತಿ ನಗರ ಪೆಟ್ರೋಲ್ ಪಂಪ್ ಸಮೀಪ ಮೂವರು ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಪಡೆದ ಮಾರ್ಕೆಟ್ ಉಪ ವಿಭಾಗದ ಎಎಸ್‌ಪಿ ರವಿ ಚನ್ನಣವರ ನೇತೃತ್ವದ ತಂಡವು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತ ಆರೋಪಿಗಳಿಂದ 10.30 ಲಕ್ಷ ರೂ. ಮೌಲ್ಯದ ಗಾಂಜಾ, 20 ಸಾವಿರ ರೂಪಾಯಿ ನಗದು ಹಾಗೂ ಕ್ರೂಸರ್ ವಾಹನ ಸೇರಿದಂತೆ ಒಟ್ಟು 13.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post Comments (+)