ಗಾಂಧಿ ಜಯಂತಿ: ಕಸದ ಬಗ್ಗೆ ಜಾಗೃತಿ

7

ಗಾಂಧಿ ಜಯಂತಿ: ಕಸದ ಬಗ್ಗೆ ಜಾಗೃತಿ

Published:
Updated:

ಬೆಂಗಳೂರು: `ಗಾಂಧೀಜಿಯ ಆದರ್ಶಗಳನ್ನು ಅಳವಡಿಸಿಕೊಂಡು ಜನರು  ರಚನಾತ್ಮಕ ಕಾರ್ಯಗಳಲ್ಲಿ ತೊಡಗಬೇಕು~ ಎಂದು ಬಸವನಗುಡಿ ಗಿರಿನಗರ ನಾಗರಿಕರ ವೇದಿಕೆಯ ವಿ.ಎಸ್.ಮೋಹನ್‌ಕುಮಾರ್ ಹೇಳಿದರು.ಬಸವನಗುಡಿ ಗಿರಿನಗರ ನಾಗರಿಕರ ವೇದಿಕೆಯು ಇತ್ತೀಚೆಗೆ ನಗರದಲ್ಲಿ ಗಾಂಧೀಜಿಯ ಜನ್ಮ ದಿನಾಚರಣೆ ಪ್ರಯುಕ್ತ ಗಾಂಧಿಯವರ ಭಾವಚಿತ್ರ ಮೆರವಣಿಗೆ ಹಾಗೂ ಕಸದ ನ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ಇದೇ ಸಂದರ್ಭದಲ್ಲಿ ಮನೆ-ಮನೆಗೆ ತೆರಳಿ ಒಣಕಸ ಮತ್ತು ಹಸಿಕಸದ ಬೇರ್ಪಡಿಸುವಿಕೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಯಿತು. ತ್ಯಾಜ್ಯ ವಸ್ತು ವಿಂಗಡಣೆ ನಗರದಲ್ಲಿ ಮುಖ್ಯವಾಗಿದೆ. ತ್ಯಾಜ್ಯದಿಂದ ಆಗುವ ಪರಿಣಾಮಗಳ ಬಗ್ಗೆ ಕೂಡ ವಿವರಿಸಲಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry