ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗ್ರಾ.ಪಂ.ಸದಸ್ಯ ಸಾವು

7

ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗ್ರಾ.ಪಂ.ಸದಸ್ಯ ಸಾವು

Published:
Updated:

ಹಾವೇರಿ: ತಾಲ್ಲೂಕಿನ ಕರ್ಜಗಿ ಗ್ರಾಮದಲ್ಲಿ ಮಂಗಳವಾರ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗ್ರಾಮ ಪಂಚಾಯ್ತಿ ಸದಸ್ಯ ಮರ್ದನ್‌ಸಾಬ ಕರಡಿ (32) ಕುಸಿದು ಬಿದ್ದು ಮೃತಪಟ್ಟರು.ಗ್ರಾಮದ ಪ್ರಾಥಮಿಕ ಶಾಲಾ ಆವರಣದ ಎದುರು ಗಾಂಧಿ ಚಿತಾಭಸ್ಮ ಸ್ಮಾರಕದಲ್ಲಿ ಗಾಂಧಿ ಪುತ್ಥಳಿ ಅನಾವರಣ ಸಮಾರಂಭ ನಡೆಯುತ್ತಿದ್ದಾಗ, ಶಾಲೆ ಎದುರಿನಲ್ಲಿ ನಿಂತಿದ್ದ ಮರ್ದನ್‌ಸಾಬ ಕುಸಿದು ಬಿದ್ದರು.ತಕ್ಷಣವೇ ಸ್ಥಳದಲ್ಲಿ ಇದ್ದ ಸಾರ್ವಜನಿಕರು ಅವರನ್ನು  ಹೊತ್ತುಕೊಂಡು ಅಂಬುಲೆನ್ಸ್ ಮೂಲಕ ಹಾವೇರಿಗೆ ಸಾಗಿಸುವಾಗ  ಮಾರ್ಗ ಮಧ್ಯದಲ್ಲಿ ಮೃತಪಟ್ಟರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry