ಶುಕ್ರವಾರ, ಏಪ್ರಿಲ್ 16, 2021
31 °C

ಗಾಂಧಿ ದಾಖಲೆಗಳ ಖರೀದಿಸಿದ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಮಹಾತ್ಮ ಗಾಂಧಿ ಅವರಿಗೆ ಸೇರಿದ ಸಾವಿರಾರು ಪತ್ರಗಳು ಹಾಗೂ ದಾಖಲೆಗಳ ಸಂಗ್ರಹವನ್ನು ಭಾರತವು ಖರೀದಿಸಿದೆ ಎಂದು  ಹರಾಜು ಕಂಪೆನಿ ಸೂತಿಸ್ ಹೇಳಿದೆ. ಆದರೆ ಭಾರತ ನೀಡಿರುವ ಹಣದ ಮೊತ್ತವನ್ನು ಅದು ಬಹಿರಂಗ ಪಡಿಸಿಲ್ಲ.ಈ ಸಂಗ್ರಹದಲ್ಲಿ ಗಾಂಧಿ ಮತ್ತು ವಾಸ್ತು ಶಿಲ್ಪಿ ಹರ್ಮನ್ ಕಲೆನ್‌ಬಾಶ್ ನಡುವಿದ್ದ ವಿವಾದಾತ್ಮಕ ಸಂಬಂಧದ ಕುರಿತ ದಾಖಲೆಗಳೂ ಇವೆ.`ಗಾಂಧೀಜಿ ಅವರಿಗೆ ಸೇರಿದ್ದ ಈ ದಾಖಲೆಗಳನ್ನು ಹರಾಜು ಹಾಕುವ ಕಾರ್ಯಕ್ರಮ ಮಂಗಳವಾರ ನಡೆಯಬೇಕಾಗಿತ್ತು. ಆದರೆ ಖಾಸಗಿ ವ್ಯವಹಾರದಲ್ಲಿ ಅವುಗಳನ್ನು ಭಾರತ ಸರ್ಕಾರಕ್ಕೆ ಮಾರಲಾಯಿತು~ ಎಂದು ಸೂತಿಸ್ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.