ಗಾಂಧಿ ನಗರ ವಾರ್ಡ್: 26ಕ್ಕೆ ಉಪಚುನಾವಣೆ

7

ಗಾಂಧಿ ನಗರ ವಾರ್ಡ್: 26ಕ್ಕೆ ಉಪಚುನಾವಣೆ

Published:
Updated:

ಬೆಂಗಳೂರು: ಕಾಂಗ್ರೆಸ್ ಸದಸ್ಯ ನಟರಾಜ್ ಹತ್ಯೆ ಹಿನ್ನೆಲೆಯಲ್ಲಿ ತೆರವಾಗಿದ್ದ ಬಿಬಿಎಂಪಿಯ ಗಾಂಧಿನಗರ ವಾರ್ಡ್‌ಗೆ ಫೆ. 26ರಂದು ಉಪ ಚುನಾವಣೆ ನಡೆಯಲಿದೆ.ರಾಜ್ಯ ಚುನಾವಣಾ ಆಯೋಗವು ಈ ಸಂಬಂಧ ಗುರುವಾರ ಅಧಿಸೂಚನೆ ಹೊರಡಿಸಿದೆ. ಫೆ. 8ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಆ ದಿನದಿಂದಲೇ ಗಾಂಧಿನಗರ ವಾರ್ಡ್ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಾಗಲಿದೆ.ಫೆ. 15 ನಾಮಪತ್ರ ಸಲ್ಲಿಸಲು ಕೊನೆಯ ದಿನ. 16ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ. ಫೆ. 18 ನಾಮಪತ್ರ ಹಿಂಪಡೆಯಲು ಕೊನೆಯ ದಿನ. 26ರಂದು ಮತದಾನ ನಡೆಯಲಿದೆ. 29ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಅಕ್ಟೋಬರ್ 1ರಂದು ಹಾಡಹಗಲೇ ದುಷ್ಕರ್ಮಿಗಳು ನಟರಾಜ್ ಅವರನ್ನು ಮಲ್ಲೇಶ್ವರದಲ್ಲಿ ಹತ್ಯೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry