ಸೋಮವಾರ, ಜೂನ್ 14, 2021
27 °C

ಗಾಂಧಿ ಮೈದಾನ ಸರಣಿ ಸ್ಫೋಟ: ಮತ್ತೊಬ್ಬ ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರ್ವಾಲ್‌(ಪಿಟಿಐ): ಪಟ್ನಾದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಗುಜರಾತ್‌ ಮುಖ್ಯ­ಮಂತ್ರಿ ನರೇಂದ್ರ ಮೋದಿ ಅವರ ರ್‍ಯಾಲಿಗೂ ಮುನ್ನ ನಡೆದ ಸರಣಿ ಬಾಂಬ್‌ ಸ್ಫೋಟಕ್ಕೆ ಸಂಬಂಧಿ­ಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)­ಮತ್ತೊಬ್ಬ ಆರೋಪಿಯನ್ನು ಇಲ್ಲಿ ಶನಿವಾರ ಬಂಧಿಸಿದೆ.ಬಂಧಿತನನ್ನು ಅಸ್ಲಂ ಪರ್ವೇಜ್‌ ಎಂದು ಗುರುತಿಸಲಾಗಿದೆ. ಈತ ರಾಮ­ಪುರ ಚೋರಮ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಆವ್‌ಗೀಲಾ ಗ್ರಾಮದವ­ನಾ­ಗಿದ್ದಾನೆ ಎಂದು ಠಾಣೆ ಮುಖ್ಯಾಧಿಕಾರಿ ರಾಜೀವ್‌ ರಾಜನ್‌ ತಿಳಿಸಿದ್ದಾರೆ.ಗಾಂಧಿ ಮೈದಾನದಲ್ಲಿ ನಡೆದ ಸರಣಿ ಸ್ಫೋಟದಲ್ಲಿ ಭಾಗಿ­ಯಾಗಿರುವುದರ ಕುರಿತು ಪರ್ವೇಜ್‌ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ರಾಜನ್‌ ತಿಳಿಸಿದ್ದಾರೆ. ಸರಣಿ ಬಾಂಬ್‌ ಸ್ಫೋಟಕ್ಕೆ ಸಂಬಂಧಿ­ಸಿದಂತೆ ಪೋಲೀಸರು ಇದು­ವರೆಗೆ ನಾಲ್ವರನ್ನು ಬಂಧಿ­ಸಿದ್ದಾರೆ.ಆದರೆ, ಸರಣಿ ಸ್ಫೋಟದ ರೂವಾರಿ ತಹಸೀನ್‌ ಅಖ್ತರ್‌ ಆಲಿ­ಯಾಸ್‌ ಮೋನು ಇನ್ನೂ ತಲೆಮರೆಸಿ­ಕೊಂಡಿದ್ದಾನೆ. ಬೋಧ­ಗಯಾ­ದಲ್ಲಿ ನಡೆದ ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್‌ಐಎ ಮಹಮ್ಮದ್‌ ಇರ್ಫಾನ್‌ ಎಂಬಾತನನ್ನು ಕಳೆದ ತಿಂಗಳು ಬಂಧಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.