ಗುರುವಾರ , ಮೇ 19, 2022
20 °C

ಗಾಂಧಿ, ಶಾಸ್ತ್ರೀ ಆದರ್ಶ ಪಾಲನೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಸತ್ಯ, ಶಾಂತಿ ಮತ್ತು ಅಹಿಂಸೆಯನ್ನು ಜಗತ್ತಿಗೆ ಬೋಧಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 142ನೇ ಜಯಂತಿ ಯನ್ನು ಭಾನುವಾರ ನಗರದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.ನಗರದ ಮಹಾತ್ಮಗಾಂಧಿ ಪ್ರತಿಮೆ ಎದುರು ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸರ್ವಧರ್ಮ ಪ್ರಾರ್ಥನೆ ಸಲ್ಲಿಸಲಾಯಿತು. ಶಾಸಕ ಸಿ.ಟಿ.ರವಿ, ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಲ್ಲಾಧಿಕಾರಿ ಡಿ.ಕೆ.ರಂಗ ಸ್ವಾಮಿ ಸೇರಿದಂತೆ ವಿವಿಧ ಪಕ್ಷಗಳ ಜನಪ್ರತಿ ನಿಧಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಗಣ್ಯರು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು.ಶ್ರೀಮಾತಾ ಮಹಿಳಾ ಮಂಡಳಿ ಸದಸ್ಯರು ನಾಡಗೀತೆ, ವಿಶ್ವವಿದ್ಯಾಲಯ ಮತ್ತು ಟೌನ್‌ಮಹಿಳಾ ಸಮಾಜ ಶಾಲೆ ವಿದ್ಯಾರ್ಥಿಗಳು ಭಗವದ್ಗೀತೆ ಶ್ಲೋಕ, ಶಶಿಕಾಂತ್‌ಭಟ್ ವೇದ, ಸ್ವಾಮಿ ಪ್ಯಾಟ್ರಿಕ್ ಬೈಬಲ್, ನಸುರುಲ್ಲಾ ಷರೀಫ್ ಕುರಾನ್ ಪಠಿಸಿದರು. ಗೋವಿಂದರಾಜು ಗಾಂಧೀಜಿ ಕುರಿತ ಗೀತೆಗಳನ್ನು ಹಾಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್‌ಕುಮಾರ್ ವಿಕಾಸ್, ಜಿ.ಪಂ. ಮುಖ್ಯಕಾರ್ಯ ನಿರ್ವಣಾಧಿಕಾರಿ ಗಂಗೇಗೌಡ, ಸಮಾಜ ಕಲ್ಯಾಣಾಧಿಕಾರಿ ಪ್ರಭಾಕರ್, ನಗರಸಭೆ ಅಧ್ಯಕ್ಷ ಡಿ.ಕೆ.ನಿಂಗೇಗೌಡ, ಸದಸ್ಯರಾದ ಸಂದೀಪ್, ಪ್ರೇಮ್‌ಕುಮಾರ್, ತಾಪಂ ಅಧ್ಯಕ್ಷ ಕನಕರಾಜ್‌ಅರಸ್, ತಹಶೀಲ್ದಾರ್ ವೀಣಾ, ನೆಹರು ಯುವಕೇಂದ್ರದ ಮಂಜುನಾಥರಾವ್ ಇನ್ನಿತರರು ಪಾಲ್ಗೊಂಡಿದ್ದರು. ಇದೇ ಸಂದರ್ಭ ಮಾಜಿ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿ ಅವರ 107ನೇ ಜನ್ಮವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.ಸ್ಕೌಟ್ಸ್ ಭವನದಲ್ಲಿ ಆಚರಣೆ: ನಗರದ ಜಿಲ್ಲಾ ಆಟದ ಮೈದಾನದಲ್ಲಿರುವ ಸ್ಕೌಟ್ ಭವನದಲ್ಲಿ ಗಾಂಧಿ ಜನ್ಮ ದಿನಾಚರಣೆ ಅರ್ಥಪೂರ್ಣವಾಗಿ ನಡೆಯಿತು.ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಸರ್ವ ಧರ್ಮ ಪ್ರಾರ್ಥನೆ ನಡೆಸಿದರು. ಟೌನ್ ಮಹಿಳಾ ಸಮಾಜ ಶಾಲೆ, ಸಂತ ಜೋಸೇಫರ ಬಾಲಕಿಯರ ಶಾಲೆ, ಸೇಂಟ್ ಮೇರಿಸ್ ಶಾಲೆ, ಜ್ಞಾನ ರಶ್ಮಿ ಶಾಲೆ ಮಕ್ಕಳು ಭಗವದ್ಗೀತೆ, ಕುರಾನ್, ಬೈಬಲ್ ಪಠಣ ಮಾಡಿದರು.ಜಿಲ್ಲಾ ಸ್ಕೌಟ್ಸ್ ಆಯುಕ್ತ ಎ.ಎನ್.ಮಹೇಶ್ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಬಾಪು ಕಂಡಿದ್ದ ರಾಮರಾಜ್ಯ ಮತ್ತು ಗ್ರಾಮ ಸ್ವರಾಜ್ಯದ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ಅವರ ನೇತೃತ್ವದಲ್ಲಿ ಸಿಕ್ಕಿದ ಸ್ವಾತಂತ್ರ್ಯ ಇಂದು ಸ್ವೇಚ್ಛಾರಕ್ಕೆ ಹೊರಳುತ್ತಿದೆ.ಪ್ರಜಾ ಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರು ವವರನ್ನು ಚುನಾವಣೆಯಲ್ಲಿ ಆಯ್ಕೆ ಮಾಡುವ ಮೂಲಕ ಗಾಂಧೀಜಿಯವರ ತತ್ವಾದರ್ಶಕ್ಕೆ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂದು ವಿಷಾದಿಸಿದರು.ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಅವರ ಸರಳ ಜೀವನ ಇಂದಿನ ರಾಜಕಾರಣಿಗಳಿಗೆ ಆದರ್ಶವಾಗಬೇಕು. ಗ್ರಾಮೀಣ ಜನತೆ ಕೂಡ ಮೌಢ್ಯತೆಯಿಂದ ಹೊರ ಬಂದು ಅವರ ಆದರ್ಶ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಜಿಲ್ಲಾ ತರಬೇತಿ ಆಯುಕ್ತರಾದ ಸಂಧ್ಯಾರಾಣಿ, ಸ್ಕೌಟ್ ಕೇಂದ್ರ ಸ್ಥಾನಿಕ ಆಯುಕ್ತ ನೀಲಕಂಠಾ ಚಾರ್, ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ರಾಘವೇಂದ್ರ, ಖಜಾಂಜಿ ನಂದಕುಮಾರ್,  ಸ್ಕೌಟ್‌ನ ಜಿಲ್ಲಾ ಸಂಘಟಕ ಡಿ.ಬಿ.ಅತ್ತಾರ್ ಇನ್ನಿತರರು ಇದ್ದರು.ಜೆಡಿಎಸ್ ಕಚೇರಿಯಲ್ಲಿ ಆಚರಣೆ: ಜಿಲ್ಲಾ ಜೆಡಿಎಸ್ ಘಟಕವೂ ಭಾನುವಾರ ಗಾಂಧಿ ಜಯಂತಿಯನ್ನು ಆಚರಿಸಿತು. ಕಚೇರಿಯ ಸಭಾಂಗಣದಲ್ಲಿ ಬಾಪು ಭಾವಚಿತ್ರಕ್ಕೆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಚ್.ದೇವರಾಜ್ ಮತ್ತು ಪಕ್ಷದ ಪದಾಧಿಕಾರಿಗಳು ಪುಷ್ಪನಮನ ಸಲ್ಲಿಸಿದರು. ಪಕ್ಷದ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಚಂದ್ರಪ್ಪ, ಮುಖಂಡರಾದ ಮಂಜಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಈಶ್ವರ್ ಹಾಗೂ ಇನ್ನಿತರರು ಇದ್ದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.