ಬುಧವಾರ, ಮೇ 18, 2022
24 °C
ಇಬ್ಬರು ಶಾಂತಿದೂತರನ್ನು ನೆನಪಿಸಿಕೊಂಡ ಮುರುಘಾ ಶರಣರು

`ಗಾಂಧಿ ಸ್ವಾತಂತ್ರ್ಯ, ಮಂಡೇಲಾಗೆ ಪ್ರೇರಣೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: `ಒಮ್ಮೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ  ದಕ್ಷಿಣ ಆಫ್ರಿಕಾದಲ್ಲಿ ಕಪ್ಪು ವರ್ಣೀಯರ ಅವಶ್ಯಕತೆಗಳ ಬಗ್ಗೆ ಮಾತನಾಡಿದಾಗ, ಅಲ್ಲಿನ ಬಿಳಿಯರು ಅವರನ್ನು ರೈಲಿನಿಂದ ಕೆಳಗೆ ದಬ್ಬಿದರು.

ಇದರಿಂದ ಅಹಿಂಸಾಮಾರ್ಗ ಹಿಡಿದ ಗಾಂಧೀಜಿ ಅವರು ನಮ್ಮ ದೇಶವನ್ನು ಪರಕೀಯರ ಆಳ್ವಿಕೆಯಿಂದ ಬಿಡುಗಡೆಗೊಳಿಸಲು ಯತ್ನಿಸಿ ಸ್ವಾತಂತ್ರ್ಯ ತಂದುಕೊಟ್ಟರು. ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದಿಂದ ಪ್ರೇರಿತರಾಗಿ ಹೋರಾಟದ ಹಾದಿ ಹಿಡಿದವರು ನೆಲ್ಸನ್ ಮಂಡೇಲಾ...'ಹೀಗೆ ಗಾಂಧೀಜಿ ಮತ್ತು ದಕ್ಷಿಣ ಆಫ್ರಿಕಾದ ಕಪ್ಪು ಜನಾಂಗದ ನಾಯಕ ನೆಲ್ಸನ್ ಮಂಡೇಲಾ ಅವರನ್ನು ಒಟ್ಟೊಟ್ಟಿಗೆ ನೆನಪಿಸಿಕೊಂಡು ವಿವರಿಸಿದವರು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು.ಗುರುವಾರ ಅಗಸನಕಲ್ಲು ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಬಸವಕೇಂದ್ರ ಮತ್ತು ಮುರುಘಾ ಮಠದ ಸಹಯೋಗದಲ್ಲಿ ಆಯೋಜಿಸಿದ್ದ ನೆಲ್ಸನ್ ಮಂಡೇಲಾ ಅವರ 95ನೇ ಜನ್ಮದಿನಾಚರಣೆಯಲ್ಲಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾ, ಮಂಡೇಲಾ ಅವರ ಹೋರಾಟದ ದಿನಗಳನ್ನು ನೆನಪಿಸಿಕೊಂಡರು.ದಕ್ಷಿಣ ಆಫ್ರಿಕಾ ದೇಶದಲ್ಲಿದ್ದ ಗುಲಾಮಗಿರಿಯನ್ನು ತೊಡೆದು ಹಾಕಬೇಕೆಂಬ ಗುರಿಯೊಂದಿಗೆ ಬದ್ಧತೆಯಿಂದ ಹೋರಾಡುತ್ತಾ, ತನ್ನ ಬದುಕನ್ನೇ ಅದಕ್ಕಾಗಿ ಮೀಸಲಿಟ್ಟವರು ಡಾ. ನೆಲ್ಸನ್ ಮಂಡೇಲಾ ಎಂದು ಹೇಳಿದರು.ಬಸವಕೇಂದ್ರ, ಮುರುಘಾಮಠದ ವತಿಯಿಂದ ಡಾ. ನೆಲ್ಸನ್ ಮಂಡೇಲಾ ಅವರ 95ನೇ ಜನ್ಮ ದಿನಾಚರಣೆ ಅಂಗವಾಗಿ ತಾಲ್ಲೂಕಿನ ಅಗಸನಕಲ್ಲುವಿನಲ್ಲಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.`ಅವಮಾನಗಳನ್ನು ಯಾರು ಅನುಭವಿಸುತ್ತಾರೋ ಅವರಿಗೆ ಜ್ಞಾನೋದಯ ಆಗುತ್ತದೆ. ಪರಕೀಯರಿಂದ ಬಿಡುಗಡೆ ಹೊಂದಬೇಕು ಎನ್ನುವ ಛಲದೊಂದಿಗೆ ಸ್ವಾತಂತ್ರ್ಯದ ಅರಿವು ಮೂಡಿದ ಮಂಡೇಲಾ ಅವರಿಗೆ ಅದು ಸಾಧ್ಯವಾದದ್ದು ಅವರ ಹೋರಾಟದಿಂದ ಎಂದು ಹೇಳಿದರು.`ಪ್ರಸ್ತುತ ಮಂಡೇಲಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಬೇಗನೆ ಚೇತರಿಸಿಕೊಳ್ಳಲಿ' ಎಂದು ಶರಣರು ಹಾರೈಸಿದರು. ಇದೇ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್, ಎಸ್‌ಜೆಎಂ ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚೈತನ್ಯ, ರಾಜಣ್ಣ, ಅರ್ಜುಮಂದ್ ಬಾನು, ಉದ್ಯಮಿ ತಾಜ್‌ಪೀರ್, ಶೇಷಣ್ಣಕುಮಾರ್, ಪರಮಶಿವಯ್ಯ, ಷಡಕ್ಷರಯ್ಯ ಹಾಜರಿದ್ದರು. ರೋಜ ಹಾಗೂ ಪ್ರಿಯದರ್ಶಿನಿ ವಚನ ಪ್ರಾರ್ಥನೆ ಮಾಡಿದರು. ಹರೀಶ್ ಸ್ವಾಗತಿಸಿದರು. ಕೊಟ್ರೇಶ್ ನಿರೂಪಿಸಿದರು. ಶಾಂತಮ್ಮ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.