ಶುಕ್ರವಾರ, ಮೇ 7, 2021
19 °C

ಗಾಂಧಿ ಹತ್ಯೆ: ರಕ್ತದ ಕಣ, ಮಣ್ಣು ಲಂಡನ್‌ನಲ್ಲಿ ಹರಾಜಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ನವದೆಹಲಿಯಲ್ಲಿ 1948ರಲ್ಲಿ ಮಹಾತ್ಮ ಗಾಂಧೀಜಿ ಹತ್ಯೆಯಾದ ಜಾಗದಲ್ಲಿ ಸಂಗ್ರಹಿಸಿರುವ ಹುಲ್ಲಿನಿಂದ ಆವೃತವಾದ ಅವರ ರಕ್ತದ ಕಣ ಹಾಗೂ ಮಣ್ಣನ್ನು ಈ ತಿಂಗಳ 17ರಂದು ಇಂಗ್ಲೆಂಡ್‌ನಲ್ಲಿ ಹರಾಜಿಗೆ ಇಡಲಾಗುತ್ತದೆ.ಗಾಂಧೀಜಿ ಬಳಸುತ್ತಿದ್ದ ಗೋಲಾಕಾರದ ಗಾಜಿನ ಕನ್ನಡಕ, ಚರಕ, ಅವರ ಸಹಿ ಇರುವ ಆಧ್ಯಾತ್ಮ ಸಂದೇಶದ ಪತ್ರ, 1931ರಲ್ಲಿ ಅವರ ಲಂಡನ್ ಭೇಟಿಯ ಛಾಯಾಚಿತ್ರಗಳು ಸಹ ಹರಾಜು ಪಟ್ಟಿಯಲ್ಲಿವೆ.ರಂಗೂನ್‌ನಲ್ಲಿದ್ದ ರಾಘವನ್ ಮತ್ತು ಸ್ಕ್ವಾಡ್ರನ್ ಎನ್‌ಇಆರ್ ಪೊದುವಾಲ್ ಅವರಿಗೆ ಇಂಗ್ಲಿಷ್‌ನಲ್ಲಿ ಗಾಂಧಿ ಬರೆದ ಪತ್ರಗಳು, ಗುಜರಾತಿ ಭಾಷೆಯ ಗಾಂಧಿ ಪತ್ರಗಳು ಹಾಗೂ ಪ್ರಾರ್ಥನಾ ಪುಸ್ತಕ ಒಂದು ಲಕ್ಷ ಪೌಂಡ್‌ಗೆ ಮಾರಾಟವಾಗುವ ಅಂದಾಜಿದೆ.ಶ್ರಾಪ್‌ಶೈರ್‌ನ ಮುಲ್ಲಾಕ್ ಎಂಬವರು ಹರಾಜು ಪ್ರಕ್ರಿಯೆ ನಡೆಸಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.