ಗಾಂಧೀಜಿ ಜೀವನಮೌಲ್ಯಗಳ ಪಾಲನೆಗೆ ಕರೆ

ಶುಕ್ರವಾರ, ಜೂಲೈ 19, 2019
°C

ಗಾಂಧೀಜಿ ಜೀವನಮೌಲ್ಯಗಳ ಪಾಲನೆಗೆ ಕರೆ

Published:
Updated:

ಮಾಗಡಿ: ಪ್ರತಿಯೊಬ್ಬರು ತಮ್ಮ ದಿನನಿತ್ಯದ ಬದುಕಿನಲ್ಲಿ ಗಾಂಧೀಜಿಯವರ ಜೀವನಮೌಲ್ಯ ಗಳನ್ನು ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ. ಹೋ. ಶ್ರೀನಿವಾಸಯ್ಯ ತಿಳಿಸಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಗಾಂಧಿ ಅಧ್ಯಯನ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ ಕಾಲೇಜುಗಳ ಶಿಕ್ಷಕರು ಗಾಂಧೀಜಿ ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದರು. ಮನುಷ್ಯ ಉತ್ತಮ ಜೀವನ ನಡೆಸಬೇಕಾದರೆ ನಮ್ಮ ಪೂರ್ವಿಕರು ಅಳವಡಿಸಿಕೊಂಡು ಬಂದಿರುವ ಸತ್ಯ, ಅಹಿಂಸೆ ಹಾಗೂ ದಯೆ, ಕರುಣೆಗಳನ್ನು ಪಾಲಿಸುವುದು ಇಂದು ಅವಶ್ಯವಾಗಿದೆ ಎಂದು ಹೇಳಿದರು.ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಡಿ. ಜೀವನ್ ಕುಮಾರ್ ಮಾತನಾಡಿ, `ವಿದ್ಯಾರ್ಥಿಗಳು ಗಾಂಧೀಜಿ ಅವರ ಚಿಂತನೆಗಳಿಂದ ಸ್ಫೂರ್ತಿಯನ್ನು ಪಡೆದು ಉತ್ತಮ ನಾಗರಿಕರಾಗಿ ಜೀವನ ರೂಪಿಸಿಕೊಳ್ಳಬೇಕು~ ಎಂದು ನುಡಿದರು.ಗಾಂಧಿ ಸ್ಮಾರಕ ನಿಧಿಯ ಕಾರ್ಯದರ್ಶಿ ಪ್ರೊ.ಜಿ.ಬಿ.ಶಿವರಾಮು ಮಾತನಾಡಿ, ಗಾಂಧೀಜಿ ಅವರ ತತ್ವ, ಆದರ್ಶಗಳಲ್ಲಿ ಮಾನವೀಯ ಮೌಲ್ಯಗಳು ಇರುವುದರಿಂದ ಅವುಗಳನ್ನು ಪಾಲಿಸುವುದು ಅಗತ್ಯವಾಗಿದೆ.ಗಾಂಧೀಜಿ ಅವರ ಅನುಯಾಯಿಗಳನ್ನು ನೋಡುವುದು ಮತ್ತು ಬಾಪೂಜಿಯ ಸರ್ವ ಸಮಾನತೆಯ ಆದರ್ಶಗಳನ್ನು ಅನುಸರಿಸುವುದು ನಮ್ಮೆಲ್ಲರ ಸೌಭಾಗ್ಯ ಎಂದರು.ಪ್ರಾಂಶುಪಾಲ ಪ್ರೊ.ಎಚ್.ಎಂ.ಜಗದೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವೇಗವಾಯಿ ಬೆಳೆಯುತ್ತಿರುವ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಗಾಂಧೀಜಿಯವರ ಆದರ್ಶಗಳನ್ನು ಇಂದಿನ ಯುವ ಜನತೆ ಮರೆಯುತ್ತಿದ್ದಾರೆ ಎಂದು ವಿಷಾದಿಸಿದರು.ರಾಜ್ಯಶಾಸ್ತ್ರಭಾಗದ ಮುಖ್ಯಸ್ಥ ಹಾಗೂ ಗಾಂಧಿ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಪ್ರೊ.ಜಗದೀಶ ನಡುವಿನಮಠ, ಪ್ರೊ.ಚಿದಾನಂದ ಸ್ವಾಮಿ, ಪ್ರೊ.ಶೋಭಾ, ಪ್ರೊ. ವೀಣಾ, ಪ್ರೊ.ನಂಜುಂಡ, ಪ್ರೊ.ಗುರುಮೂರ್ತಿ, ಪ್ರೊ.ನರಸಿಂಹಮೂರ್ತಿ, ಪ್ರೊ.ಮಂಜುನಾಥ್ ಇತರರು ವೇದಿಕೆಯಲ್ಲಿದ್ದರು.ನಾರಾಯಣಪ್ಪ ದತ್ತಿ ವತಿಯಿಂದ ನಡೆಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ 45 ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಮತ್ತು ಬೆಂಗಳೂರು ವಿ.ವಿ. ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry