ಗಾಂಧೀಜಿ ತತ್ವಾದರ್ಶಗಳ ಪಾಲನೆ ಇಂದಿನ ಅಗತ್ಯ

7

ಗಾಂಧೀಜಿ ತತ್ವಾದರ್ಶಗಳ ಪಾಲನೆ ಇಂದಿನ ಅಗತ್ಯ

Published:
Updated:

ಹಾವೇರಿ: `ಗಾಂಧೀಜಿಯವರು ತಮ್ಮ ಜೀವನದುದ್ದಕ್ಕೂ ಪಾಲಿಸಿದ, ತತ್ವಾ ದರ್ಶಗಳು ಇಂದಿಗೂ ಸಹ ಪ್ರಸ್ತುತ ವಾಗಿವೆ~ ಎಂದು ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕೆ.ಸಿ. ರಾಮಕೃಷ್ಣಯ್ಯ ಹೇಳಿದರು.ಜಿಲ್ಲಾ ನ್ಯಾಯಾಲಯದ ಆವರಣ ದಲ್ಲಿ ಗಾಂಧಿ ಜಯಂತಿ ಅಂಗವಾಗಿ ನಡೆದ `ಕಾನೂನು ಅರಿವು-ನೆರವು~ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಗಾಂಧೀಜಿ ಅವರ ಸತ್ಯ, ಅಹಿಂಸೆ ಪ್ರಸ್ತುತ ಸಮಾಜಕ್ಕೆ ಅತ್ಯವಶ್ಯವಾಗಿವೆ. ಯುವಕರು ಗಾಂಧಿ ವಿಚಾರಧಾರೆ ಗಳನ್ನು ಅಧ್ಯಯನ ಮಾಡುವುದರ ಜತೆಗೆ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕೆಂದು ಸಲಹೆ ಮಾಡಿದರು.

ವಿದ್ಯಾವಂತರಲ್ಲಿ ಕಾನೂನಿನ ಅರಿವು ಉಂಟಾದಲ್ಲಿ ಅಶಿಕ್ಷಿತ ಜನರಲಗೆ ಮಾರ್ಗದರ್ಶನ ಮಾಡಲು ಸಾಧ್ಯ ವಾಗುತ್ತದೆ. ಸಭ್ಯ ವ್ಯಕ್ತಿಯಾಗಿ ಕಾನೂನು ಪಾಲನೆ ಮಾಡುವ ಮೂಲಕ ಸಮಾಜದ ಒಳಿತಿಗೆ ಸಹಕರಿ ಸಿದಂತಾಗುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ತ್ವರಿತ ನ್ಯಾಯಾ ಲಯದ ನ್ಯಾಯಾಧೀಶ ಜಿ.ಎನ್. ಶ್ರೀಕಂಠಯ್ಯ ಮಾತನಾಡಿ, ಗಾಂಧೀಜಿ ಯವರ ಮೂಲ ತತ್ವಗಳಾದ ಸತ್ಯ, ಶಾಂತಿ ಹಾಗೂ ಅಹಿಂಸೆಯ ದಾರಿ ಯಲ್ಲಿ ಇಂದಿನ ಪೀಳಿಗೆ ಮುನ್ನಡೆದು ದೇಶದ ಗೌರವವನ್ನು ಹೆಚ್ಚಿಸಬೇಕಿದೆ ಎಂದರು.ಹೆಚ್ಚುವರಿ ಹಿರಿಯ ನ್ಯಾಯಾಧೀಶ ಕೆ. ರವೀಂದ್ರ, ಹಿರಿಯ ಸಹಾಯಕ ಅಭಿಯೋಜಕ ಯಳಗೇರಿ ಹಾಜ ರಿದ್ದರು. ಹಿರಿಯ ವಕೀಲ ಡಿ.ಟಿ. ಬಿಳಿಯಣ್ಣನವರ ಮಾತನಾಡಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶ ಬಿ. ವೆಂಕಟೇಶ ಸ್ವಾಗತಿಸಿ, ನಿರೂಪಿಸಿದರು. ಪ್ರಥಮ ದರ್ಜೆಯ ನ್ಯಾಯಿಕ ದಂಡಾಧಿಕಾರಿ ಎನ್. ಶ್ರೀಪಾದ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry