`ಗಾಂಧೀಜಿ ತತ್ವ ಇಂದಿಗೂ ಪ್ರಸ್ತುತ'

7

`ಗಾಂಧೀಜಿ ತತ್ವ ಇಂದಿಗೂ ಪ್ರಸ್ತುತ'

Published:
Updated:
`ಗಾಂಧೀಜಿ ತತ್ವ ಇಂದಿಗೂ ಪ್ರಸ್ತುತ'

ಬೆಂಗಳೂರು: ಗಾಂಧೀಜಿಯ ತತ್ವ- ಸಿದ್ಧಾಂತಗಳು ಇಂದಿಗೂ ಪ್ರಸ್ತುತ. ಇದಕ್ಕೆ ಇಂದಿಗೂ ಗಾಂಧಿಯ ಮೇಲೆ ಜನರು ಇಟ್ಟುಕೊಂಡಿರುವ ನಂಬಿಕೆಯೇ ಸಾಕ್ಷಿ ಎಂದು ಮಹಾತ್ಮ ಗಾಂಧೀಜಿಯವರ ಮೊಮ್ಮಗಳು ಸುಮಿತ್ರಾ ಗಾಂಧಿ ಕುಲಕರ್ಣಿ ಹೇಳಿದರು.ಸಪ್ತಸಾಗರ ಪ್ರಕಾಶನವು ಶನಿವಾರ ಆಯೋಜಿಸಿದ್ದ `ಕನ್ನಡದ ಮಣ್ಣಲ್ಲಿ ಮಹಾತ್ಮನ ಜೀವನಗು' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಸತ್ಯ, ಅಹಿಂಸೆಯ ದಾರಿಯಲ್ಲಿ ಸಾಗಿದರೆ ಆತ್ಮವಿಶ್ವಾಸವು ಹೆಚ್ಚುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ದೇಶಪ್ರೇಮದ ಜತೆಗೆ ಸತ್ಯ, ಅಹಿಂಸೆಯನ್ನು ಅಳವಡಿಸಿಕೊಳ್ಳಬೇಕು ಎಂದರು. ನಾನು ರಕ್ತಸಂಬಂಧದಿಂದ ಮಾತ್ರ ಗಾಂಧೀಜಿಯ ಮೊಮ್ಮಗಳು. ಆದರೆ, ಈ ದೇಶದ ಪ್ರಜೆಗಳೆಲ್ಲರೂ ಮಾನಸಿಕವಾಗಿ ಗಾಂಧೀಜಿಯ ಮೊಮ್ಮಕ್ಕಳಾಗಿದ್ದಾರೆ. ಹೀಗಾಗಿ ಗಾಂಧೀಜಿಯ ಮೌಲ್ಯಗಳು ಎಲ್ಲರಿಗೂ ಸೇರಿದಂಥವು ಎಂದರು.ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮಾತನಾಡಿ, ಗಾಂಧೀಜಿಯ ಬಗ್ಗೆ ಮಾತನಾಡುವ ಅರ್ಹತೆ ರಾಜಕಾರಣಿಗಳಿಗಿಲ್ಲ. ಗಾಂಧೀಜಿಯವರ ತತ್ವ ಆದರ್ಶಗಳಿಗೆ ವಿರುದ್ಧವಾಗಿ ಇಂದಿನ ಸಮಾಜ ಸಾಗುತ್ತಿದೆ ಎಂದು ಅವರು ವಿಷಾದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry