ಶುಕ್ರವಾರ, ಮೇ 14, 2021
31 °C

ಗಾಂಧೀಜಿ ವಸ್ತುಗಳು ಹರಾಜಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತ್ರಿಶ್ಯೂರ್ (ಪಿಟಿಐ):  ಮಹಾತ್ಮ ಗಾಂಧಿ ಹತ್ಯೆಯ ವೇಳೆ ಅವರ ರಕ್ತದಿಂದ ಒದ್ದೆಯಾದ ಮಣ್ಣು, ಕೈಬರಹದ ಪತ್ರಗಳು, ಧರಿಸುತ್ತಿದ್ದ ಕನ್ನಡಕ, ಗುಜರಾತಿ ಭಾಷೆಯಲ್ಲಿರುವ ಪ್ರಾರ್ಥನಾ ಗ್ರಂಥ ಶೀಘ್ರ ಲಂಡನ್‌ನಲ್ಲಿ ಹರಾಜಿಗೆ ಬರಲಿವೆ.ಕೇರಳದ ಆಂಟನಿ ಚಿಟ್ಟಾಟ್ಟುಕಾರಾ ಎಂಬ ನಿವೃತ್ತ ಶಿಕ್ಷಕ ಮತ್ತು ಗಾಂಧಿವಾದಿ ಈ ವಸ್ತುಗಳನ್ನು 20 ವರ್ಷಗಳಿಂದ ಬ್ಯಾಂಕ್ ಲಾಕರ್‌ನಲ್ಲಿ ಜೋಪಾನವಾಗಿ ಇಟ್ಟಿದ್ದರು. ಲಂಡನ್ ಮೂಲದ ಮುಲ್ಲೋಕ್ಸ್ ಎಂಬ ಜಾಗತಿಕ ಹರಾಜು ಕಂಪೆನಿ ಮೂಲಕ ಅವರು ಈ ವಸ್ತುಗಳನ್ನು ಹರಾಜಿಗೆ ಇಡಲಿದ್ದಾರೆ. ಎಲ್ಲ ಔಪಚಾರಿಕ ಪ್ರಕ್ರಿಯೆ ಮುಗಿದ ನಂತರ ಹರಾಜು ದಿನವನ್ನು ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.