ಗಾಂಧೀಜಿ ಸತ್ಯಾಗ್ರಹ ಮಾರ್ಗ ಹೆಚ್ಚು ಪ್ರಸ್ತುತ

7

ಗಾಂಧೀಜಿ ಸತ್ಯಾಗ್ರಹ ಮಾರ್ಗ ಹೆಚ್ಚು ಪ್ರಸ್ತುತ

Published:
Updated:

ಕಾರವಾರ: ಗಾಂಧೀಜಿ ಅವರ ಸತ್ಯಾಗ್ರಹ ಮಾರ್ಗ ಇಂದು ಹೆಚ್ಚು ಪ್ರಸ್ತುತವಾಗಿದೆ ಎಂದು ಅಂಕೋಲಾ ಗೋಖಲೆ ಸೆಂಟನರಿ ಕಾಲೇಜಿನ  ಸಹಪ್ರಾಧ್ಯಾಪಕ ಬಿ.ಎಚ್.ನಾಯಕ್ ಅಭಿಪ್ರಾಯಪಟ್ಟರು.ಇಲ್ಲಿಯ ಕೋಡಿಬಾಗದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ವಾರ್ತಾ ಇಲಾಖೆ ಹಾಗೂ ಎನ್‌ಎಸ್‌ಎಸ್ ಘಟಕ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಗಾಂಧಿಯಾಗಲು ಸಾಧ್ಯವಿಲ್ಲ.ಆದರೆ ಗಾಂಧೀಜಿಯವರ ಕೆಲವು ತತ್ವಗಳನ್ನು ಅಳವಡಿಸಿಕೊಳ್ಳಲು ಪ್ರತಿಯೊಬ್ಬರಿಗೂ ಸಾಧ್ಯವಿದೆ. ಸಾಧ್ಯವಿದ್ದಷ್ಟು ಸರಳ ಜೀವನ ನಡೆಸುವುದು ಗಾಂಧಿ ಮಾರ್ಗವಾಗಿದೆ. ದೇಶದ ಒಟ್ಟು 130ಕೋಟಿ ಜನಸಂಖ್ಯೆಯಲ್ಲಿ ಬಹುಪಾಲು ಮಂದಿ ಯುವ ಜನಾಂಗವಿದ್ದು, ಇವರಿಗೆ ಗಾಂಧಿ ಉತ್ತಮ ಆದರ್ಶ ಆಗಬೇಕಿದೆ ಎಂದರು.ಅಹಿಂಸಾ ಮಾರ್ಗದ ಮೂಲಕ ಮಾತ್ರ ಶಾಂತಿ ಸ್ಥಾಪನೆ ಸಾಧ್ಯ ಎಂಬುವುದನ್ನು ಗಾಂಧೀಜಿ ಪ್ರಾಯೋಗಿಕವಾಗಿ ಮಾಡಿ ತೋರಿಸಿದ್ದಾರೆ. ಗಾಂಧಿ ಅವರ ಸತ್ಯಾಗ್ರಹ ವಿಶ್ವದ ಹಲವು ಕ್ರಾಂತಿಗಳಿಗೆ, ಬದಲಾವಣೆಗಳಿಗೆ ಸ್ಪೂರ್ತಿಯಾಗಿದೆ. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ತನಗೆ ಗಾಂಧೀಜಿ ಪ್ರೇರಣೆ ಎಂದು ಹೇಳಿದ್ದನ್ನು ಅವರು ನೆನಪಿಸಿದರು.ಅಧ್ಯಕ್ಷತೆ ವಹಿಸಿದ್ದ ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿ ಯು.ಬಿ.ಭಟ್ ಅವರು ಮಾತನಾಡಿ, ಗಾಂಧೀಜಿ ಅವರು ತಮ್ಮ ಬೋಧನೆಗಳನ್ನು ಆಚರಣೆಗೆ ತಂದರು. ಈ ಕಾರಣದಿಂದಲೇ ಅವರು ಮಹಾತ್ಮ ಎನಿಸಿದ್ದಾರೆ. ಸಕಾರಾತ್ಮಕವಾಗಿ ಚಿಂತಿಸುವ ಮೂಲಕ ಜೀವನದಲ್ಲಿ ಹಲವು ಯಶಸ್ಸು ಕಾಣಲು ಸಾಧ್ಯವಿದೆ ಎಂದರು.ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಶಫಿ ಸಾದುದ್ದೀನ್ ಅವರು ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಸ್ನಾತಕೋತ್ತರ ಕೇಂದ್ರದ ಎನ್‌ಎಸ್‌ಎಸ್ ಅಧಿಕಾರಿ ಜೆ.ಎಲ್.ರಾಠೋಡ್ ಅವರು ಎನ್‌ಎಸ್‌ಎಸ್ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ರಾಜು ಕರಡಿ ಅವರು ವಂದಿಸಿದರು.ಇದೇ ಸಂದರ್ಭದಲ್ಲಿ ಮಹಾತ್ಮಾ ಗಾಂಧಿ ಅವರ ಜೀವನ ಚರಿತ್ರೆಯನ್ನು ಆಧರಿಸಿ ನ್ಯಾಷನಲ್ ಗಾಂಧಿ ಮ್ಯೂಸಿಯಂ ಸಿದ್ಧಪಡಿಸಿರುವ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಗಾಂಧಿ ಜಯಂತಿ ಅಂಗವಾಗಿ ವಾರ್ತಾ ಇಲಾಖೆ ಹೊರ ತಂದಿರುವ ಜನಪದ ಮಾಸಿಕದ ವಿಶೇಷ ಗಾಂಧಿ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

ಗ್ರಾಮೀಣ ಕ್ರೀಡಾಕೂಟ ಇಂದುಭಟ್ಕಳ:  ತಾಲ್ಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ ಇದೇ 8 ಬೆಳಿಗ್ಗೆ 9ಗಂಟೆಗೆ ಇಲ್ಲಿನ ಬೆಳಕೆ ಸರ್ಕಾರಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ನಡೆಯಲಿದೆ.ಶಾಸಕ ಜೆ.ಡಿ. ನಾಯ್ಕ ಉದ್ಘಾಟಿಸುವರು. ತಾ.ಪಂ. ಅಧ್ಯಕ್ಷ ಪಾರ್ಶ್ವನಾಥ ಶೆಟ್ಟಿ ಅಧ್ಯಕ್ಷತೆ ವಹಿಸುವರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry