ಗಾಜಿನಲ್ಲಿ ಕಲಾಲೋಕ
ಗಾಜಿನಲ್ಲಿ ಕಲಾಕೃತಿಯನ್ನು ರೂಪುಗೊಳಿಸುವುದು ನಾಜೂಕಿನ ಕೆಲಸ. ಬಲು ಸೂಕ್ಷ್ಮ ವಾದ ಗಾಜಿನಲ್ಲಿ ಕಲೆ ಸಾಕಾರ ಗೊಳ್ಳಬೇಕಾದರೆ ಸಾಕಷ್ಟು ಏಕಾಗ್ರತೆ ಬೇಕು. ಕಲಾವಿದ ತಾನು ಮೂಡಿಸಬೇಕಾದ ಆಕೃತಿ ಯನ್ನು ಮೊದಲು ಮನಸ್ಸಿಗೆ ತಂದುಕೊಂಡು, ನಂತರ ಅದನ್ನು ಗಾಜಿನ ಮೇಲೆ ನಿಚ್ಚಳವಾಗಿ ಮೂಡಿಸಬೇಕೆಂದರೆ ಅಪಾರ ಶ್ರಮ ಸಹ ಬೇಕು. ಗಿದ್ದಾಗಲೇ ಅದೊಂದು ಅತ್ಯುತ್ತಮ ಕಲಾಕೃತಿಯಾಗಿ ಹೊರಹೊಮ್ಮಲು ಸಾಧ್ಯ.
ಗಾಜು ಕಲೆಯಲ್ಲಿ ಕಲಾವಿದರಾದ ಸಿಸಿರ್ ಸಹನಾ ಅವರದು ಬಹು ದೊಡ್ಡ ಹೆಸರು. ಅವರ ಸೃಜನಶೀಲತೆ ಮೂಸೆಯೊಳಗೆ ಸೃಜಿಸಿದ ಕಲಾಕೃತಿಗಳು ವೀಕ್ಷಕರಲ್ಲಿ ಬೆರಗು ಹುಟ್ಟಿಸುತ್ತವೆ. ಒಂದೊಂದು ಕಥೆ ಹೇಳುತ್ತವೆ. ನೋಡುಗರ ಮನಸ್ಸಿಗೆ ಆಪ್ತವೆನಿಸುತ್ತವೆ.
ಸ್ಥಳ: ಗ್ಯಾಲರಿ ಸುಮುಖ, ಡಿಪೋ ರಸ್ತೆ, ವಿಲ್ಸನ್ಗಾರ್ಡನ್. ಮಾಹಿತಿಗೆ: 2229 2230, 4120 7215 (ಪ್ರದರ್ಶನ ಅ. 31ರ ವರೆಗೆ ಮಾತ್ರ).
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.