ಸೋಮವಾರ, ಮೇ 10, 2021
25 °C

ಗಾಜಿನ ಮನೆಯಿಂದ...

- ತ್ರಿವೇಣಿ ಬಾಲರಾಜ್,ಬೆಂಗಳೂರು. Updated:

ಅಕ್ಷರ ಗಾತ್ರ : | |

ಸಂಗತದಲ್ಲಿ (ಜೂನ್ 18) ಕಾ. ತ. ಚಿಕ್ಕಣ್ಣನವರು ಸರ್ಕಾರದ ಸಾಂಸ್ಕೃತಿಕ ಸಂಸ್ಥೆಗಳು ಮತ್ತು ಸ್ವಾಯತ್ತತೆ ಬಗ್ಗೆ ಬಹುದೊಡ್ಡ ಆದರ್ಶದ ಮಾತುಗಳನ್ನಾಡಿದ್ದಾರೆ. ಇವೆಲ್ಲಾ ಜನರಿಗೆ ಗೊತ್ತಾಗಬೇಕಾದ ಸಂಗತಿಗಳು.ಆದರೆ ಅಕಾಡೆಮಿಗಳು ಹುಟ್ಟಿದಂದಿನಿಂದ ಇಂದಿನವರೆಗೂ ಎಂದಾದರೂ ಜಾತಿ ರಾಜಕಾರಣ ಮತ್ತು ವ್ಯಕ್ತಿ ಶಿಫಾರಸಿನ ಲಾಬಿ ಇಲ್ಲದೇ ಅಕಾಡೆಮಿಗಳ ಅಧ್ಯಕ್ಷರು, ಸದಸ್ಯರ ನೇಮಕಾತಿ ಆಗಿದ್ದು ಇದೆಯೇ? ಆಡಳಿತ ವ್ಯವಸ್ಥೆ ಒಳಗಿನ ಒಂದು ಭಾಗವಾಗಿಯೇ ಇದ್ದ ಕಾ. ತ. ಚಿಕ್ಕಣ್ಣನವರು ಅಧ್ಯಕ್ಷರು ಮತ್ತು ಸದಸ್ಯರುಗಳ ತತ್ವನಿಷ್ಠೆಯ ಬಗ್ಗೆ ಆದರ್ಶದ ಮಾತುಗಳನ್ನಾಡುವುದು ಗಾಜಿನ ಮನೆಯಲ್ಲಿ ಕುಳಿತು ಹೊರಗಿನವರಿಗೆ ಕಲ್ಲು ಹೊಡೆದಂತಿದೆ.

- ತ್ರಿವೇಣಿ ಬಾಲರಾಜ್, ಬೆಂಗಳೂರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.