ಗಾಜಿನ ಮನೆಯ ಆಟಿಕೆ ರೈಲು ನಾಳೆ ಸಂಚಾರಕ್ಕೆ ಸಿದ್ಧ

7

ಗಾಜಿನ ಮನೆಯ ಆಟಿಕೆ ರೈಲು ನಾಳೆ ಸಂಚಾರಕ್ಕೆ ಸಿದ್ಧ

Published:
Updated:
ಗಾಜಿನ ಮನೆಯ ಆಟಿಕೆ ರೈಲು ನಾಳೆ ಸಂಚಾರಕ್ಕೆ ಸಿದ್ಧ

ಹುಬ್ಬಳ್ಳಿ: ಕಾಂಪೌಂಡ್ ಕುಸಿದು ಎಂಜಿನ್‌ಗೆ ಹೆಚ್ಚಿನ ಹಾನಿಯಾಗಿರುವ ಹಿನ್ನೆಲೆಯಲ್ಲಿ ಇಲ್ಲಿನ ಇಂದಿರಾ ಗಾಜಿನ ಮನೆಯ  ಆಟಿಕೆ ರೈಲು ಶುಕ್ರವಾರದಿಂದ ಸಂಚಾರ ಆರಂಭಿಸಲಿದೆ.ಉರುಳಿಬಿದ್ದ ರೈಲನು ಕ್ರೇನ್ ಸಹಾಯದಿಂದ ಹಳಿಯ ಮೇಲೆ ನಿಲ್ಲಿಸಲಾಗಿದೆಯಾದರೂ ಎಂಜಿನ್‌ನ ರಿಪೇರಿ ಕಾರ್ಯ ತಡವಾಗಿದೆ ಎಂದು ದುರಸ್ತಿ ಕಾರ್ಯಕೈಗೆತ್ತಿಕೊಂಡಿರುವ ಕಂಪೆನಿಯ ಅಧಿಕಾರಿಯೊಬ್ಬರು ತಿಳಿಸಿದರು.ತನಿಖೆಗೆ ಸೂಚನೆ: ಇಂದಿರಾಗಾಜಿನ ಮನೆಯ ನವೀಕರಣ ಕಾರ್ಯ ನಡೆದು ಕೇವಲ ಒಂದು ವರ್ಷವಾಗಿದ್ದು, ನಿರ್ಮಿತಿ ಕೇಂದ್ರ ಕಾಮಗಾರಿ ಕೈಗೊಂಡಿತ್ತು. ಇಷ್ಟು ಬೇಗನೆ ಕಾಂಪೌಂಡ್ ಗೋಡೆ ಕುಸಿದುಬಿದ್ದಿರುವುದು ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ, ಮಹಾನಗರ ಪಾಲಿಕೆ ಕಾರ್ಯಪಾಲಕ ಎಂಜಿನಿಯರ್ ನೇತೃತ್ವದಲ್ಲಿ ವಿಚಾರಣೆಗೆ ಈಗಾಗಲೇ ಸೂಚನೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry