ಸೋಮವಾರ, ಜೂನ್ 21, 2021
21 °C

ಗಾಜಿನ ಮೇಲಿನ ಜಾಹೀರಾತು ತೆರವುಗೊಳಿಸಿ

ಬಸವರಾಜ ಹುಡೇದಗಡ್ಡಿ Updated:

ಅಕ್ಷರ ಗಾತ್ರ : | |

ನಗರ ಸಾರಿಗೆ ಸಂಸ್ಥೆಯು ಹತ್ತು ವರ್ಷಗಳ ಹಿಂದೆ ಬಸ್ ಆಸನಗಳ ಪಕ್ಕದಲ್ಲಿಯ ಕಿಟಕಿಗಳ ಮೇಲ್ಭಾಗದಲ್ಲಿ ಅಲ್ಯುಮಿನಿಯಂ ಶೀಟನ್ನು ಮೇಲ್ಛಾವಣೆಯವರೆಗೆ ಹಾಕಲಾಗಿತ್ತು. ಆದರೆ ಜೆ.ಎನ್‌. ನರ್ಮ್ ಯೋಜನೆಯಡಿ ಮಹಾನಗರ ಸಾರಿಗೆ ಸಂಸ್ಥೆಗೆ ಮೂರ್‍್ನಾಲ್ಕು ಬಾಗಿಲುಗಳ ಬಸ್‌ಗಳನ್ನು ಸೇರಿಸಿಕೊಳ್ಳಲಾಗಿದೆ. ಅವುಗಳಿಗೆ ಪ್ರಯಾಣಿಕರ ಕಿಟಕಿಯ ಮೇಲ್ಭಾಗದಲ್ಲಿಯ ಭಾಗದಲ್ಲಿ ಅಲ್ಯುಮಿನಿಯಂ ಶೀಟ್‌ಗಳಿಗೆ ಬದಲಾಗಿ ಪಾರದರ್ಶಕ ವಿಶಿಷ್ಟ ಗುಣದ ಗಾಜನ್ನು ಅಳವಡಿಸಲಾಗಿದೆ.ನಗರ ಸಾರಿಗೆಯ ಬಸ್‌ಗಳನ್ನು ಬಳಸುವ ಪ್ರಯಾಣಿಕರ ಸಂಖ್ಯೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಹೆಚ್ಚಾಗಿದೆ. ಇದರಿಂದಾಗಿ ಬಸ್‌ಗಳಲ್ಲಿ ವಿವಿಧ ಬಡಾವಣೆಗಳಿಗೆ ಹೋಗುವ ಪ್ರಯಾಣಿಕರು ನಿಂತು ಪ್ರಯಾಣ ಮಾಡುವುದು ಅನಿವಾರ್ಯ.ಪ್ರಯಾಣಿಕರ ಆಸನಗಳ ಪಕ್ಕದ ಕಿಟಕಿಯ ಮೇಲೆ ಅಳವಡಿಸಲಾದ ಪಾರದರ್ಶಕ ಗಾಜಿನ ಹೊದಿಕೆಯಿಂದಾಗಿ ನಿಂತು ಪ್ರಯಾಣಿಸುವ ಪ್ರಯಾಣಿಕರು ತಾವು ಹೋಗಬೇಕಾದ ಬಡಾವಣೆ ಬಸ್‌ ನಿಲುಗಡೆ ಸ್ಥಳಗಳನ್ನು ನೋಡಿ ತಿಳಿದುಕೊಂಡು ಇಳಿಯಲು ಅನುಕೂಲವಾಗಿತ್ತು.

ಆದರೆ ಸಾರಿಗೆ ಸಂಸ್ಥೆಯು ವಾಣಿಜ್ಯ ಜಾಹೀರಾತುಗಳಿಂದ ಹಣವನ್ನು ಪಡೆಯುವ ಉದ್ದೇಶದಿಂದ ಪಾರದರ್ಶಕ ಗಾಜುಗಳ ಮೇಲೆ ವಿವಿಧ ಜಾಹೀರಾತುಗಳನ್ನು ಅಂಟಿಸಲು ಸಾರಿಗೆ ಸಂಸ್ಥೆ ಅವಕಾಶ ನೀಡಿದೆ. ಇದರಿಂದಾಗಿ ನಿಂತು ಪ್ರಯಾಣಿಸುವ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ.ಪ್ರಯಾಣಿಕರು ತಾವು ತಲುಪುವ ಬಡಾವಣೆ, ತಂಗುದಾಣ ನೋಡಲು ಗಾಜಿನ ಹೊದಿಕೆಯಿಂದ ಅನುಕೂಲವಾಗಬೇಕು.

ಜಾಹೀರಾತು ಅಂಟಿಸುವ ಜಾಗವನ್ನು ಬದಲಾಯಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.