ಗಾಢ ವರ್ಣ, ನಿಗೂಢ ಭಾವ

7

ಗಾಢ ವರ್ಣ, ನಿಗೂಢ ಭಾವ

Published:
Updated:

ಗಾಢ ವರ್ಣಗಳು, ನಿಗೂಢ ಭಾವಗಳು, ಬಯಲಾಗಿರುವುದು ವಿವಿಧ ಮಾಧ್ಯಮಗಳಲ್ಲಿ. ಗುಲ್ಬರ್ಗದ ಕಲಾವಿದರು ಮಂಗಳವಾರದಿಂದ ಗುರುವಾರದವರೆಗೆ ಏರ್ಪಡಿಸಿರುವ ಚಿತ್ರಕಲಾ ಪ್ರದರ್ಶನದ ವಿಶೇಷ ಇದು.‘ಪಾರದರ್ಶಕ’ ಗುಣವನ್ನೇ ಮೂಲ ಸರಕಾಗಿಸಿಕೊಂಡು ಆ್ಯಕ್ರಿಲಿಕ್ ಮಾಧ್ಯಮದಲ್ಲಿ ಚಿತ್ರಗಳನ್ನು ಬಿಡಿಸಲಾಗಿದೆ. ರೆಹಮಾನ್ ಪಟೇಲ್, ವಿನೋದ್ ರಘುವೀರ, ಸಂಗಮೇಶ ಚಿಲ್ಸೆಟ್ಟಿ, ಜೀತೆಂದ್ರ ಕೊಥಾಲಿಕರ್ ವಿವಿಧ ಮಾಧ್ಯಮಗಳಲ್ಲಿ ಕಲಾಕೃತಿ ಮೂಡಿಸಿದ್ದಾರೆ.ವಿನೋದ್ ಅವರ ಗ್ರಾಮೀಣ ಮುಖಗಳು, ಅಕ್ಷರಗಳ ಹಿನ್ನೆಲೆಯಲ್ಲಿ ಗಮನ ಸೆಳೆಯುತ್ತವೆ. ಅಂಕಗಳ ಲೆಕ್ಕಾಚಾರ, ಅಕ್ಷರಗಳ ವಿವಿಧಾಕಾರ, ಇವೆಲ್ಲಕ್ಕೂ ಗ್ರಾಮೀಣರಿಗೆ ಅಕ್ಷರ ದೊರೆಯಲಿ ಎಂಬ ಆಕಾಂಕ್ಷೆಯ ಭಾವ ಕಾಣಸಿಗುತ್ತದೆ.‘ಸೌಂಡ್ ಅಂಡ್ ಇಫೆಕ್ಟ್’ ಹೆಸರಿನ ಸಂಗ್ರಹದಲ್ಲಿ ರೆಹಮಾನ್ ಪಟೇಲ್ ಗಾಢ ವರ್ಣಗಳಲ್ಲಿ ನಿಸರ್ಗದ ವಾಸ್ತವ ಚಿತ್ರಣಗಳಲ್ಲಿ ಪರಿಣಾಮಕಾರಿಯಾಗಿ ಅಭಿವ್ಯಕ್ತಿಗೊಳಿಸಿದ್ದಾರೆ. ಜನರು ಪಾರದರ್ಶಕ ವ್ಯವಸ್ಥೆಗೆ ಹಾತೊರೆಯುತ್ತಿದ್ದಾರೆ. ವ್ಯವಸ್ಥೆ, ನಿಸರ್ಗ, ಸಾಂಗತ್ಯ, ಗ್ರಾಮೀಣ ಬದುಕು ಹೀಗೆ ವಿವಿಧ ಆಯಾಮಗಳಲ್ಲಿ ಪಾರದರ್ಶಕವನ್ನು ಮೂಲ ಸರಕಾಗಿಸಿ ಈ ಕಲಾಕೃತಿಗಳನ್ನು ಪ್ರದರ್ಶನಕ್ಕೆ ತಂದಿದ್ದಾರೆ ಗುಲ್ಬರ್ಗದ ಈ ಗೆಳೆಯರ ಗುಂಪು.ಲೆಕ್ಕಾಚಾರದ ಮನಸಿಗೊಂದು ನಗೆಮೊಗದ ಮುಖವಾಡ ಹಾಕುವ ಮುಖಗಳು, ಭಾವಾಭಿವ್ಯಕ್ತಿಗೆ ಅಕ್ಷರಗಳು ಒಲಿಯದ, ಮುಗುದೆಯರ ಮುಖಗಳು, ಗ್ರಾಮೀಣ ಬದುಕಿನ ವಿವಿಧ ಚಿತ್ರಣಗಳು ಪರದೆಯೊಳಗಣ ಭಾವಗಳನ್ನೂ ಬಯಲಿಗೆಳೆಯುವ ಪ್ರಯತ್ನ ಈ ಸ್ನೇಹಿತರದ್ದು. 

ಸ್ಥಳ: ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry