ಗಾಣದಪಡ್ಪು: ಯುವವಾಹಿನಿ ಘಟಕ ‘ಬೆಳ್ಳಿಹಬ್ಬ’

7

ಗಾಣದಪಡ್ಪು: ಯುವವಾಹಿನಿ ಘಟಕ ‘ಬೆಳ್ಳಿಹಬ್ಬ’

Published:
Updated:

ಬಂಟ್ವಾಳ: ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶವನ್ನು ಮುಂದಿಟ್ಟುಕೊಂಡು ಬಿಲ್ಲವರು ಶಿಕ್ಷಣ ಮತ್ತು ಧಾರ್ಮಿಕತೆ ಮೂಲಕ ಸಂಘಟಿತರಾಗಿ ರಾಜಕೀಯ ಕ್ಷೇತ್ರದ­ಲ್ಲಿಯೂ ಬೆಳೆಯಲು ಸಾಧ್ಯವಿದೆ. ಇದಕ್ಕಾಗಿ ಪ್ರತೀ ಗುರುಮಂದಿರಗಳಲ್ಲಿ ಬಾಲ್ಯದಿಂದಲೇ ಸಂಸ್ಕಾರ ನೀಡುವ ಕೆಲಸ ಆಗಬೇಕು ಎಂದು ತುಳು ಅಕಾ­ಡೆಮಿ ನಿಕಟಪೂರ್ವ ಅಧ್ಯಕ್ಷ ಉಮಾ­ನಾಥ ಎ.ಕೋಟ್ಯಾನ್ ಹೇಳಿದರು.ತಾಲ್ಲೂಕಿನ ಯುವವಾಹಿನಿ ಘಟಕ ವತಿಯಿಂದ ‘ಬೆಳ್ಳಿಹಬ್ಬ’ ಪ್ರಯುಕ್ತ ಬಿ.ಸಿ.ರೋಡ್‌ ಗಾಣದಪಡ್ಪುವಿನಲ್ಲಿ ಭಾನುವಾರ ನಡೆದ ಚಪ್ಪರ ಮುಹೂರ್ತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬಂಟ್ವಾಳ ತಾಲ್ಲೂಕಿನ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಕ್ಯಪದವು ಬ್ರಹ್ಮಬೈದರ್ಕಳ ಗರಡಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಕೇಂದ್ರ ಸಮಿತಿ ಅಧ್ಯಕ್ಷ ರವಿಚಂದ್ರ, ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸದಸ್ಯ ಎಂ.ತುಂಗಪ್ಪ ಬಂಗೇರ, ಬೆಳ್ಳಿಹಬ್ಬ ಸಮಿತಿ ಸಂಚಾಲಕ ಜಿತೇಂದ್ರ ಜೆ.ಸುವರ್ಣ, ಗುರುಸಂದೇಶ ಯಾತ್ರೆ ಸಮಿತಿ ಸಂಚಾಲಕ ಟಿ.ಶಂಕರ ಸುವರ್ಣ ಮತ್ತಿತರರು ಶುಭ ಹಾರೈಸಿದರು.ಘಟಕದ ಮಾಜಿ ಅಧ್ಯಕ್ಷ ತಾರನಾಥ ಸ್ವಾಗತಿಸಿ, ಕಾರ್ಯದರ್ಶಿ ನಾಗೇಶ ವಂದಿಸಿದರು. ಪ್ರಚಾರ ಸಮಿತಿ ಸಂಚಾಲಕ ಶ್ರೀಧರ ಅಮೀನ್ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry