ಗಾಣಿಗ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು

7

ಗಾಣಿಗ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು

Published:
Updated:

ಬಾಗಲಕೋಟೆ: ತಾಲ್ಲೂಕು ಗ್ರಾಮೀಣ ಭಾಗದ ಯುವ ಗಾಣಿಗ ಘಟಕದ ಸಭೆ ಹಾಗೂ ವಿವಿಧ ಪದಾಧಿಕಾರಿಗಳ ಆಯ್ಕೆ ಶಿಗೀಕೇರಿ ಕ್ರಾಸ್ ಸಮೀಪದ ಕದಾಂಪೂರ ಆರ್.ಸಿ ಕೇಂದ್ರದ ಬಸವೇಶ್ವರ ದೇವಸ್ಥಾನದಲ್ಲಿ ಮಂಗಳವಾರ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಗಾಣಿಗ ಸಮಾಜ ಜಿಲ್ಲಾ ಅಧ್ಯಕ್ಷ ಆಶೋಕ ಲಾಗಲೋಟಿ, ಸಮಾಜ ಸಂಘಟನೆಯ ಉದ್ದೇಶ ಯಾವುದೇ ರಾಜಕೀಯ ದುರುದ್ದೇಶದಿಂದ ಕೂಡಿರುವುದಿಲ್ಲ. ಸಮಾಜವನ್ನು ಸಂಘಟಿಸಿ ಸಮಾಜದಲ್ಲಿರುವ ಬಡವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಹಾಗೂ ಬಡಕುಟುಂಬಗಳಿಗೆ ಸಹಾಯ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದರು.  ಸಮಾಜವನ್ನು ಅಭಿವೃದ್ಧಿಯತ್ತ ಒಯ್ಯಲು ಸಂಘಟನೆ ಇಂದು ತುಂಬಾ ಅವಶ್ಯವಿದೆ ಎಂದು ಹೇಳಿದರು.    

ಪದಾಧಿಕಾರಿ ಆಯ್ಕೆ: ಬಾಗಲಕೋಟೆ ತಾಲ್ಲೂಕು ಗ್ರಾಮೀಣ ಉಪಾಧ್ಯಕ್ಷರಾಗಿ ಈರಪ್ಪ ಯಂಕಂಚಿ, ಖಜಾಂಚಿ ಮಹಾಂತೇಶ ಗೌಡರ, ಸಂಘಟನಾ ಕಾರ್ಯದರ್ಶಿ ಯಮನಪ್ಪ ಕದಾಂಪೂರ, ಪರಶು ಹೊನ್ನಾಳ, ಬಸು ಮಲ್ಲಾಪೂರ ತಿಮ್ಮಣ್ಣಗೌಡ ಪಾಟೀಲ, ಸದಸ್ಯರಾಗಿ ಮಲ್ಲು ಚೂರಿ, ಸಂಗಮೇಶ ಮಂಕಣಿ, ಬೊಮ್ಮಣ್ಣ ಮೇಟಿ, ಶಿವುಕುಮಾರ ದೇಸಾಯಿ, ಕೂಡ್ಲಪ್ಪ ಶಿಕ್ಕೇರಿ, ಕಲ್ಮೇಶ ಮೇಟಿ, ಮಲ್ಲಪ್ಪ ತುಂಬರಮಟ್ಟಿ, ಎಸ್.ಆರ್.ದಾಳಿ, ಪರಶು ಬನಕಾರ, ಪರಸು ಕದಾಂಪೂರ ಪದಾಧಿಕಾರಿಗಳಾಗಿ ಆಯ್ಕೆಯಾದರು.    ಜಿಲ್ಲಾ ಯುವ ಘಟಕದ ಅಧ್ಯಕ್ಷ ಸುರೇಶ ಮಜ್ಜಗಿ, ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಮುರಗೇಶ ಅಳಗವಾಡಿ ಮಾತನಾಡಿ ಸಮಾಜದ ಸಂಘಟನೆಯ ವಿಷಯದಲ್ಲಿ ತಮ್ಮ ತಮ್ಮ ರಾಜಕೀಯ ವಿಷಯಗಳನ್ನು ಬದಿಗೆ ಒತ್ತಿ ಸಮಾಜ ಕಟ್ಟುವ ಕೆಲಸ ಮಾಡುವುದು ಅಗತ್ಯವಿದೆ ಎಂದರು.ಬಸವರಾಜ ಕೂಡಲಗಿ, ಚನ್ನಬಸಪ್ಪ ಮಾಚಕನೂರ, ಮಲ್ಲಪ್ಪ ಜಲಗೇರಿ, ಅಣ್ಣಪ್ಪ ಮಂಕಣಿ, ಮಹಾದೇವ ಏಳೆಮ್ಮಿ, ಮಂಜುನಾಥ ಕಾಜೂರ , ಬಸಪ್ಪ ಕಡಿವಾಲ, ಶಿವಲಿಂಗಪ್ಪ ಗೌಡರ, ಎಚ್.ಎನ್.ಸೇಬನ್ನವರ, ಈರಣ್ಣ ಜಂಗವಾಡ, ಪಕೀರಪ್ಪ ಹೊಟ್ಟಿ, ಬಾಬು ನಾಡಗೌಡ ಮುದಕಪ್ಪ ಬನಕಾರ, ಮನೋಹರ ಏಳೆಮ್ಮಿ, ಶಿವಯೋಗಿ ಹೊಟ್ಟಿ, ವಿಠ್ಠಲ ಮೂಲಿಮನಿ ಸಮಾಜದ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry