ಗಾ.ಪಂ. ಉಪಾಧ್ಯಕ್ಷರ ಅವಿರೋಧ ಆಯ್ಕೆ

7

ಗಾ.ಪಂ. ಉಪಾಧ್ಯಕ್ಷರ ಅವಿರೋಧ ಆಯ್ಕೆ

Published:
Updated:

ಹೊಸಕೋಟೆ: ತಾಲ್ಲೂಕಿನ ಗಿಡ್ಡಪ್ಪನಹಳ್ಳಿ ಗ್ರಾ.ಪಂ.ಉಪಾಧ್ಯಕ್ಷರಾಗಿ ಯಣಗುಂಟೆ ಗ್ರಾಮದ ವೈ.ಸಿ.ಶ್ರೀನಿವಾಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿತ್ತು. ಆದರೆ, ಯಾರೂ ನಾಮಪತ್ರ ಸಲ್ಲಿಸದ ಕಾರಣ ಆ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಲಿಲ್ಲ ಎಂದು ಚುನಾವಣಾಧಿಕಾರಿ ವಿ.ಸಿ.ಬಸವರಾಜೇಗೌಡ ತಿಳಿಸಿದ್ದಾರೆ.ಲಕ್ಕೊಂಡಹಳ್ಳಿ ಗ್ರಾ.ಪಂ.ಅಧ್ಯಕ್ಷರಾಗಿ ವೆಂಕಟಾಪುರದ ವರಲಕ್ಷ್ಮಿ ಆಯ್ಕೆಯಾಗಿದ್ದಾರೆ. ಅವರು 12-5 ಮತಗಳ ಅಂತರದಿಂದ ಮುನಿತಾಯಮ್ಮ ವಿರುದ್ಧ ಜಯ ಗಳಿಸಿದರು. ಉಪಾಧ್ಯಕ್ಷರಾಗಿ ಭಾರತೆಗೌಡ ಅವರು 9-8 ಮತಗಳ ಅಂತರದಿಂದ ಮಂಜುಳಾ ವಿರುದ್ಧ ಜಯ ಗಳಿಸಿದರು.ಒರೋಹಳ್ಳಿ ಗ್ರಾ.ಪಂ.ಅಧ್ಯಕ್ಷರಾಗಿ ನಾಗಮ್ಮ, ಉಪಾಧ್ಯಕ್ಷರಾಗಿ ಜೆ. ಲೋಕೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry