ಮಂಗಳವಾರ, ಅಕ್ಟೋಬರ್ 15, 2019
22 °C

ಗಾಯಕಿಯ ನಿಸರ್ಗ ಪ್ರೀತಿ

Published:
Updated:

ಸೌಂದರ್ಯವೆಂದರೆ ಎಲ್ಲರಿಗೂ ಪ್ರೀತಿ. ಕನ್ನಡಿಯ ಮುಂದೆ ನಿಂತ ಪ್ರತಿಯೊಬ್ಬರು ಇನ್ನಷ್ಟು ನನ್ನ ಮುಖ ಹೊಳಪಿದ್ದರೆ ಚೆನ್ನಾಗಿರುತ್ತಿತ್ತು ಎಂದು  ಒಂದು ಸಲವಾದರೂ ಹೇಳಿಕೊಳ್ಳುವುದರ ಜೊತೆಗೆ ತಮ್ಮ ಅಂದ ಹೆಚ್ಚಿಸಿಕೊಳ್ಳುವುದಕ್ಕಾಗಿ ಏನೆಲ್ಲಾ ಸರ್ಕಸ್ ಮಾಡುತ್ತಾರೆ. ಜಾಹೀರಾತುಗಳಲ್ಲಿ ಬರುವ ನಾನಾ ವಿಧದ ಸೋಪ್, ಕ್ರೀಮ್‌ಗಳ ಮೊರೆ ಹೋಗುತ್ತಾರೆ. ಕೊನೆಗೆ ಛೆ! ಮುಖದ ಬಣ್ಣ ಕೆಟ್ಟಿತು ಎಂದು ಚಿಂತಿಸುತ್ತಾರೆ.ನಿಸರ್ಗದಲ್ಲಿರುವಷ್ಟು ವಿಶಿಷ್ಟವಾದ ಸೌಂದರ್ಯವರ್ಧಕಗಳು ಬೇರೆಲ್ಲಿಯೂ ಇಲ್ಲ. ಕೃತಕತೆಗೆ ಒಗ್ಗಿ ಹೋಗಿರುವ ಮನಸ್ಸಿಗೆ ನೈಸರ್ಗಿಕ ತಂಪು ಸೇರಿದರೆ ಅಂದವೂ ಹೆಚ್ಚುತ್ತದೆ. ಮಾರುಕಟ್ಟೆಯಲ್ಲಿ ದೊರಕುವ ಹತ್ತಾರು ದೇಶಿ, ವಿದೇಶಿ ಕ್ರೀಮ್, ಸೋಪ್‌ಗಾಗಿ ಪರ್ಸ್ ಬರಿದು ಮಾಡಿಕೊಂಡು, ಆಮೇಲೆ ವ್ಯಥೆ ಪಡುವ ಹೆಂಗೆಳೆಯರ ಮೊಗದಲ್ಲಿ ನಗು ಮೂಡಿಸಲು ಗಾಯಕಿ ರಮ್ಯಾ ವಸಿಷ್ಠ ಮುಂದಾಗಿದ್ದಾರೆ.ಹಿಮಾಲಯದ ತಪ್ಪಲಿನ ವಿಶಿಷ್ಟ ಹೂವಿನ ಸಾರದಿಂದ ಸಿದ್ಧಪಡಿಸಲಾದ ಫೇಸ್ ಜೆಲ್, ಸೋಪ್‌ಗಳನ್ನು ಹರಿದ್ವಾರದಿಂದ ತರಿಸುತ್ತಾರೆ. ಇಲ್ಲಿ ಮಾರುತ್ತಾರೆ.ಇತ್ತೀಚೆಗಷ್ಟೇ ಗಾಯಕ ರಾಜೇಶ್ ಕೃಷ್ಣನ್ ಅವರನ್ನು ವರಿಸಿರುವ ಗಾಯಕಿ ರಮ್ಯಾಗೆ ಇದೊಂದು ಹಾಬಿ. ಅವರು ಈ ವೃತ್ತಿಗೆ ಇಳಿದು ಆರು ತಿಂಗಳಾಯಿತು.`ಹ್ಯಾಂಡ್ ಮೇಡ್ ಎಂದು ಮಾಲ್‌ನಲ್ಲಿ ಸಿಗುವ  ಸೋಪ್‌ಗಳನ್ನು ನಾನು ಕೊಂಡುಕೊಳ್ಳುತ್ತಿದ್ದೆ. ಆದರೆ ಇದರಿಂದ ನನಗೆ ಯಾವುದೇ ಪ್ರಯೋಜನವಾಗಲಿಲ್ಲ . ಹಾಗಾಗಿ ಸುಮಾರು ಎರಡು ಮೂರು ವರ್ಷದಿಂದ ನಾನು ಈ ಹ್ಯಾಂಡ್ ಮೇಡ್ ಸೋಪ್ ಉಪಯೋಗಿಸುತ್ತಿದ್ದೇನೆ. ಇದು ಒಂದು ಒಳ್ಳೆಯ ನ್ಯಾಚುರಲ್ ಪ್ರೊಡಕ್ಟ್. ಇದನ್ನು ಬಳಸುವುದರಿಂದ ಚರ್ಮಕ್ಕೆ ಯಾವುದೇ ರೀತಿಯ ಹಾನಿಯಿಲ್ಲ~ ಎಂದು ಹೇಳುತ್ತಾರೆ ರಮ್ಯಾ.ಈ ಸೋಪ್‌ಗಳು ಉಳಿದ ಸೋಪ್‌ಗಳಂತೆ ಅಲ್ಲ ಅನ್ನುವ ಅವರು ಇದರಲ್ಲಿ ಬಳಸಿರುವ ನೈಸರ್ಗಿಕ ವಸ್ತುಗಳ ಬಗ್ಗೆ ಖುಷಿಯಿಂದ ವಿವರಿಸುತ್ತಾರೆ. ಇದರಲ್ಲಿ ಆಡಿನ ಹಾಲಿನಿಂದ ತಯಾರಾದ, ಹಿಮಾಲಯದ ಹೂಗಳಿಂದ ತಯಾರಿಸಿದ ವಿಶಿಷ್ಟ ಬಗೆಯ 28 ಸೋಪ್‌ಗಳಿವೆಯಂತೆ.  `ಪರಿಮಳಯುಕ್ತವಾದ ಈ ಸೋಪ್‌ನ್ನು ಬಳಸುವುದರಿಂದ ಬೇರೆ ಯಾವುದೇ ಸುಗಂಧದ್ರವ್ಯ ಬಳಸುವ ಅಗತ್ಯವಿಲ್ಲ. ನನ್ನ ಸ್ನೇಹಿತರೆಲ್ಲ ಇದನ್ನೇ ಉಪಯೋಗಿಸುತ್ತಾರೆ ಎಂದು ಹೇಳುವ ಅವರು ಪರಿಶುದ್ಧವಾದ ಸಂಗೀತದಂತೆ  ನೈಸರ್ಗಿಕ ಸೌಂದರ್ಯವನ್ನು ನಾನು ಗೌರವಿಸುತ್ತೇನೆ~ ಎಂದು ಹೇಳಿದರು.`ಇದು ನ್ಯಾಚುರಲ್ ವಸ್ತುಗಳಿಂದ ಮಾಡುವುದರಿಂದ ಸ್ವಲ್ಪ ದುಬಾರಿ. ಆದರೆ ಆರೋಗ್ಯದ ದೃಷ್ಟಿಯಿಂದ ಇದು ಚರ್ಮಕ್ಕೆ ತುಂಬಾನೇ ಉತ್ತಮ ಎಂದು ರಮ್ಯಾ ಹೇಳುತ್ತಾರೆ. ಈಗಾಗಲೇ ಇದಕ್ಕೆ ಭಾರೀ ಬೇಡಿಕೆ ಇದೆಯಂತೆ. ಸಂಗೀತದೊಂದಿಗೆ ಈ ವೃತ್ತಿಯನ್ನು ಪ್ರೀತಿಸುತ್ತೇನೆ. ಹಾಗೇ ಇದಕ್ಕೆ ಅವರ ಪತಿ ರಾಜೇಶ್ ಕೃಷ್ಣನ್ ಸಹ ಬೆಂಬಲವಿದೆ~ ಎಂದು ಹೆಮ್ಮೆಯಿಂದ ನುಡಿಯುತ್ತಾರೆ.ಈ ಸೋಪ್ ಕಿಟ್‌ನ್ನು ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯಾಗಿಯೂ ನೀಡಬಹುದಂತೆ. ಒಂದು ಬಾಕ್ಸ್‌ನಲ್ಲಿ  ಏಳು ಸೋಪ್ ಇರುತ್ತದೆ ಇದನ್ನು ಸುಮಾರು ಎಂಟು ತಿಂಗಳು ಉಪಯೋಗಿಸಬಹುದು. ಮಾಹಿತಿಗೆ: 98440 00054.

 

Post Comments (+)