ಗಾಯಕಿ ಅಡೆಲ್‌ಗೆ 6 ಟ್ರೋಫಿ

7

ಗಾಯಕಿ ಅಡೆಲ್‌ಗೆ 6 ಟ್ರೋಫಿ

Published:
Updated:
ಗಾಯಕಿ ಅಡೆಲ್‌ಗೆ 6 ಟ್ರೋಫಿ

ಲಾಸ್ ಏಂಜಲೀಸ್ (ಪಿಟಿಐ): ಇಲ್ಲಿ ನಡೆದ 54ನೇ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ಸೋಲೊ ಗಾಯಕಿ ಅಡೆಲ್ ಅವರು ವರ್ಷದ ಆಲ್ಬಮ್ ಪ್ರಶಸ್ತಿ ಮತ್ತು ಇತರ ಐದು ಟ್ರೋಫಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.ವರ್ಷದ ಆಲ್ಬಮ್ ಪ್ರಶಸ್ತಿ ಸ್ವೀಕರಿಸುತ್ತಿದ್ದಂತೆಯೇ ಪುಳಕಿತಗೊಂಡ ಅವರು, `ಅಮ್ಮಾ!~ ಎಂದು ಉದ್ಗರಿಸಿದರು. ಕಳೆದ ವರ್ಷದ ನವೆಂಬರ್‌ನಲ್ಲಿ ಅಡೆಲ್ ಅವರು ಧ್ವನಿ ಪೆಟ್ಟಿಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.23 ವರ್ಷದ ಅಡೆಲ್ ಅವರು ಪ್ರಶಸ್ತಿಯ ಆರೂ ವಿಭಾಗಗಳಲ್ಲಿಯೂ ಟ್ರೋಫಿ  ಪಡೆದುಕೊಂಡಿದ್ದಾರೆ. ಭಾನುವಾರ ಮೃತಪಟ್ಟ ಖ್ಯಾತ ಗಾಯಕಿ ವಿಟ್ನಿ ಹ್ಯೂಸ್ಟನ್ ಸಾವಿನ ಶೋಕದಲ್ಲಿಯೇ ರಾತ್ರಿ ನಡೆದ ಹೃದಯ ಸ್ಪರ್ಶಿ ಸಮಾರಂಭದಲ್ಲಿ ಗಾಯಕ ಜೆನ್ನಿಫೆರ್ ಹಡ್ಸನ್ ಅವರು ವಿಟ್ನಿ ಅವರಿಗೆ ಸಂಗೀತ ಶ್ರದ್ಧಾಂಜಲಿ ಅರ್ಪಿಸಿದರು.ಸಮಾರಂಭದಲ್ಲಿ ಗಾಯಕ ಗ್ರೊಹ್ಲ್ ಅವರು ಐದು ಗ್ರ್ಯಾಮಿ ಮತ್ತು ಟೋನಿ ಬೆನ್ನೆಟ್, ಟೇಲರ್ ಸ್ವಿಫ್ಟ್ ಸಹ ಪ್ರಶಸ್ತಿ ಸ್ವೀಕರಿಸಿದರು.ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಅವರು ಬಿಳಿ ನಿಲುವಂಗಿ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಆಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಸ್ಮರಿಸಿ ಅವರಿಗೆ ಮರಣೋತ್ತರ ಗ್ರ್ಯಾಮಿ ಪ್ರಶಸ್ತಿ ನೀಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry