ಶುಕ್ರವಾರ, ಮೇ 14, 2021
22 °C
`ರಂಗಭೂಮಿಗೆ ಜನಪದ ಸಂಗೀತದ ಜೀವಂತಿಕೆ ತಂದ ಹಿರಿಮೆ'

ಗಾಯಕಿ ಬಿ. ಜಯಶ್ರೀಗೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ರಂಗಭೂಮಿಗೆ ಜನಪದ ಸಂಗೀತದ ಜೀವಂತಿಕೆಯನ್ನು ತಂದುಕೊಟ್ಟವರು ಬಿ.ಜಯಶ್ರೀ' ಎಂದು ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.ರಂಗ ಗೆಳೆಯರ ತಂಡವು ಬುಧವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಾಯಕಿ, ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.`ನಾಟಕ ಮತ್ತು ಸಂಗೀತದ ಅನುಭವವನ್ನು ಪದಗಳಲ್ಲಿ ಹೇಳಲಾಗುವುದಿಲ್ಲ. ಅಂತಹ ಕಾಡುವ ಅಭಿನಯವನ್ನು ನೀಡಿದವರು ಬಿ.ಜಯಶ್ರೀ. ಅವರು ನಾಟಕದಲ್ಲಿ ನೀಡುವ ಜೀವಂತಿಕೆಯ ಅನುಭವವು ಎಂದಿಗೂ ಕಾಡುವಂತಹುದಾಗಿದೆ' ಎಂದರು.ಅಭಿನಂದನೆ ಸ್ವೀಕರಿಸಿ ಮಾತನಾಡಿದ ಬಿ.ಜಯಶ್ರೀ ಅವರು, `ನಾನು ಇಷ್ಟೊಂದು ಅಭಿನಂದನೆಗೆ ಅರ್ಹಳೇ ಎಂಬ ಪ್ರಶ್ನೆ ಕಾಡುತ್ತದೆ' ಎಂದರು.`ಹಿಂದಿನ ಕಾಲದ ನನ್ನ ಹಿರಿಯರು ಸಾಗಿದ ದಾರಿಯಲ್ಲಿ ನಡೆಯುತ್ತ ಬಂದಿದ್ದೇನೆ ಹೊರತು ನಾನು ಹೊಸದೇನನ್ನೂ ಮಾಡಿಲ್ಲ' ಎಂದು ಅವರು ಹೇಳಿದರು.ರಂಗಕರ್ಮಿಗಳಾದ ಶ್ರೀನಿವಾಸ ಜಿ.ಕಪ್ಪಣ್ಣ, ಶ್ರೀಪತಿ ಮಂಜನಬೈಲು ಮೊದಲಾದವರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.