ಗಾಯಕ ರಹತ್ ಅಲಿ ಖಾನ್ ವಶಕ್ಕೆ

7

ಗಾಯಕ ರಹತ್ ಅಲಿ ಖಾನ್ ವಶಕ್ಕೆ

Published:
Updated:

ನವದೆಹಲಿ (ಪಿಟಿಐ): ಪಾಕಿಸ್ತಾನದ ಹೆಸರಾಂತ ಗಾಯಕ ರಹತ್ ಫತೇಹ್ ಅಲಿ ಖಾನ್ ಅವರನ್ನು ಇಲ್ಲಿನ ಐಜಿಐ ವಿಮಾನನಿಲ್ದಾಣದಲ್ಲಿ ಕಂದಾಯ ಗುಪ್ತದಳ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.ಅವರು ಮತ್ತು ಅವರ ತಂಡದ ಇಬ್ಬರು ಸದಸ್ಯರು ಅಕ್ರಮವಾಗಿ  1.24 ಲಕ್ಷ ಡಾಲರ್ ವಿದೇಶಿ ಹಣವನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ತಂಡದ 16 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ರಹತ್ ಅವರು ಪಾಕ್‌ನ ಖ್ಯಾತ ಗಾಯಕ ಉಸ್ತಾದ್ ನಸ್ರತ್ ಫತೇಹ್ ಅಲಿ ಖಾನ್ ಅವರ ಸೋದರ ಸಂಬಂಧಿಯಾಗಿದ್ದು, ಬಾಲಿವುಡ್‌ನಲ್ಲಿ ಅವರು ಹಾಡಿರುವಗೀತೆಗಳು ಜನಪ್ರಿಯ ಆಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry