ಶನಿವಾರ, ನವೆಂಬರ್ 23, 2019
18 °C

`ಗಾರ್ಡನ್'ನಲ್ಲಿ ವಜ್ರದ ಮೆರುಗು...

Published:
Updated:

ಜರ್ಬೆರಾ ಹೂವುಗಳ ತೋರಣ. ಒಳಗೆ ಇಣುಕಿದರೆ ಆಭರಣಗಳನ್ನು ಪ್ರದರ್ಶಿಸುತ್ತಾ ನಿಂತ ಸಿನಿಮಾ ನಟಿ ಟೀನಾ ಪೊನ್ನಪ್ಪ. ಬಿಗಿ ನೀಲಿ ಉಡುಪು ಧರಿಸಿ ಕ್ಯಾಮೆರಾ ಕಣ್ಣಿನ ನೋಟಕ್ಕೆ ಸಿಗುತ್ತಿದ್ದರಾದರೂ ಮಿಂಚ್ದ್ದಿದು ಮಾತ್ರ ಅವರು ತೊಟ್ಟ ವಜ್ರದ ಆಭರಣಗಳು.

ವಿವಿಧ ವಿನ್ಯಾಸದ, ಬಣ್ಣದ ಆಭರಣಗಳನ್ನು ಪ್ರದರ್ಶಿಸಿದ್ದು ರೆಸಿಡೆನ್ಸಿ ರಸ್ತೆಯಲ್ಲಿರುವ `ಜ್ಯುವೆಲ್ಸ್ ಗಾರ್ಡನ್' ಮಳಿಗೆಯಲ್ಲಿ.



1910ರಲ್ಲಿ ಅಸ್ತಿತ್ವಕ್ಕೆ ಬಂದ ಈ ಮಳಿಗೆ ಈ ಬಾರಿ ಸಾಂಪ್ರದಾಯಿಕ ಹಾಗೂ ಸಮಕಾಲೀನ ವಿನ್ಯಾಸದ ಆಭರಣಗಳ ಪ್ರದರ್ಶನ `ಡೈಮಂಡ್ ಹಾರ್ವೆಸ್ಟ್' ಅನ್ನು ಏರ್ಪಡಿಸಿದೆ. ಫ್ಯೂಶನ್ ವಿನ್ಯಾಸದ ಆಭರಣಗಳು ಈ ಬಾರಿಯ ವಿಶೇಷ.



ಒಂದಾದ ಮೇಲೊಂದರಂತೆ ಆಭರಣಗಳನ್ನು ಕ್ಯಾಮೆರಾ ಕಣ್ಣಿಗೆ ಪ್ರದರ್ಶಿಸುತ್ತಿದ್ದ ಟೀನಾ ವಿನ್ಯಾಸಕ್ಕೆ ತುಸು ಬೆರಗಾದಂತಿತ್ತು. `ಹೆಣ್ಣುಮಕ್ಕಳಿಗೆ ಆಭರಣ ಎಂದರೆ ತುಂಬಾ ಪ್ರೀತಿ. ಅದರಲ್ಲೂ ವಜ್ರ ಆಪ್ತಸ್ನೇಹಿತನಂತೆ. ನಾನು ಮೊದಲಿನಿಂದಲೂ ಇದೇ ಮಳಿಗೆಯಲ್ಲಿ ಆಭರಣಗಳನ್ನು ಕೊಂಡುಕೊಳ್ಳುತ್ತಿದ್ದೇನೆ.



ಈ ಬಾರಿಯ ವಜ್ರ, ಮುತ್ತು, ಹವಳಗಳ ಜೋಡಣೆಯ ವಿನ್ಯಾಸವಂತೂ ಬಹಳ ಇಷ್ಟವಾಗಿದೆ. ಪ್ರತಿ ಬಾರಿಯೂ ವಿನ್ಯಾಸದಲ್ಲಿ ವೈವಿಧ್ಯ ಇರುವುದು ಇಲ್ಲಿಯ ವಿಶೇಷ. ಬಾಲಿವುಡ್ ಜನರು ಧರಿಸುವ ಆಭರಣಗಳಷ್ಟೇ ಅಂದವನ್ನು ಆಭರಣಗಳು ನೀಡಲಿವೆ. ಈ ಉಂಗುರವನ್ನು ನೋಡಿ. ಒಂದು ಬೆರಳಿಗೆ ಹಾಕಿಕೊಂಡರೆ ಎರಡು ಬೆರಳನ್ನು ಆವರಿಸಿ ಎಷ್ಟು ಸುಂದರವಾಗಿ ಕಾಣುತ್ತಿದೆ' ಎಂದು ಕೂದಲನ್ನು ತುಸು ಹಿಂದೆ ಸರಿಸಿ ಕೊರಳಲ್ಲಿರುವ ವಜ್ರದ ನೆಕ್ಲೇಸನ್ನು ಸರಿ ಮಾಡಿಕೊಂಡರು ಟೀನಾ.



ಮಾತಿಗೆ ಸಿಕ್ಕ ಮಾಲೀಕ ಕೇದಾರ್‌ನಾಥ್ ತಮ್ಮ ನೂತನ ಸಂಗ್ರಹದ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡಿದ್ದು ಹೀಗೆ: `ಮೊದಲೆಲ್ಲಾ ಆಯಾ ಹಬ್ಬಗಳಿಗೆ ಅನುಗುಣವಾಗಿ ನಮ್ಮ ಆಭರಣದ ವಿನ್ಯಾಸಗಳಿರುತ್ತಿದ್ದವು. ಈ ಬಾರಿ ಹಬ್ಬಕ್ಕಷ್ಟೇ ಅಲ್ಲದೆ ಎಲ್ಲಾ ಸಂದರ್ಭಗಳಲ್ಲಿಯೂ ಧರಿಸಲು ಅನುಕೂಲವಾಗುವಂತೆ ರೂಪಿಸಿದ್ದೇವೆ. ನಮ್ಮದೇ ವಿನ್ಯಾಸ ಕಾರ್ಯಾಗಾರ ನಡೆಯುತ್ತದೆ.



ಕರ್ನಾಟಕ, ಗುಜರಾತ್, ಕೇರಳ ಮುಂತಾದ ಕಡೆಯ ವಿನ್ಯಾಸಕರು ಅಲ್ಲಿ ಭಾಗವಹಿಸುತ್ತಾರೆ. ಹೀಗಾಗಿ ಎಲ್ಲಾ ಶೈಲಿಯ ವಿನ್ಯಾಸವನ್ನು ಬೆರೆಸಿ ಹೊಸದೊಂದು ಶೈಲಿಯ ಆಭರಣಗಳನ್ನು ಹೊರತಂದಿದ್ದೇವೆ. ಅದೂ ಅಲ್ಲದೆ ಆಭರಣದ ಸೆಟ್‌ಗಳ ಬದಲು ಒಂದೊಂದೇ ಆಭರಣಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡಿರುವುದು ಈ ಬಾರಿಯ ವಿಶೇಷ.



ರಿಯಾಯಿತಿ ದರಗಳನ್ನು ಯಾಕೆ ಇಟ್ಟಿಲ್ಲ ಎಂದು ಕೇಳುವವರಿದ್ದಾರೆ. ಈಗಿನ ಮಹಿಳೆಯರು ಬುದ್ಧಿವಂತರು. ಎಲ್ಲಾ ವಿನ್ಯಾಸ ಬೆಲೆಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಯಾವ ಗಿಮಿಕ್ಕುಗಳಿಗೂ ಮರುಳಾಗದಷ್ಟು ಚಿಂತನಾಶೀಲರಾಗಿದ್ದಾರೆ. ಹೀಗಾಗಿ ರಿಯಾಯಿತಿ ನೀಡುವ ಗೋಜಿಗೆ ಹೋಗಿಲ್ಲ. ಆಭರಣಗಳಿಗೆ ತಕ್ಕುದಾದ ಬೆಲೆಯನ್ನೇ ನಿಗದಿ ಮಾಡಿದ್ದೇವೆ'.



ಎಲ್ಲಾ ಗಾತ್ರದ ಉಂಗುರ, ಬ್ರೇಸ್‌ಲೈಟ್, ಬಳೆಗಳು, ವಾಚ್‌ಗಳು, ನೆಕ್ಲೇಸ್, ಪೆಂಡೆಂಟ್‌ಗಳು ತಮ್ಮ ವಿಶೇಷ ವಿನ್ಯಾಸದಿಂದ ಇಷ್ಟವಾಗುವಂತಿವೆ. ಮಳಿಗೆಯಲ್ಲಿ ರೂ15ಸಾವಿರದಿಂದ ರೂ15 ಲಕ್ಷದ ಆಭರಣಗಳು ಲಭ್ಯ. ಏ.10ರವರೆಗೆ ನಡೆಯಲಿರುವ ಈ ಪ್ರದರ್ಶನದ ಅವಧಿ ಬೆಳಿಗ್ಗೆ 10ರಿಂದ ಸಂಜೆ 8 ಗಂಟೆವರೆಗೆ.

ಪ್ರತಿಕ್ರಿಯಿಸಿ (+)