ಗಾಲ್ಫ್: ಅನುರಾಗೆ ಪ್ರಶಸ್ತಿ

7

ಗಾಲ್ಫ್: ಅನುರಾಗೆ ಪ್ರಶಸ್ತಿ

Published:
Updated:
ಗಾಲ್ಫ್: ಅನುರಾಗೆ ಪ್ರಶಸ್ತಿ

ಬೆಂಗಳೂರು: ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡ ಶ್ರೀಲಂಕಾದ ಅನುರಾ ರೋಹಾನ ಇಲ್ಲಿ ಕೊನೆಗೊಂಡ ಗ್ಲೋಬಲ್ ಗ್ರೀನ್ ಬೆಂಗಳೂರು ಓಪನ್ ಗಾಲ್ಫ್ ಟೂರ್ನಿಯಲ್ಲಿ ಚಾಂಪಿಯನ್ ಆದರು.ಕರ್ನಾಟಕ ಗಾಲ್ಫ್ ಸಂಸ್ಥೆ ಕೋರ್ಸ್ ನಲ್ಲಿ ಶನಿವಾರ ಕೊನೆಗೊಂಡ ಟೂರ್ನಿಯಲ್ಲಿ ಅನುರಾ ಒಟ್ಟು 276 ಸ್ಟ್ರೋಕ್‌ಗಳೊಂದಿಗೆ ಅಗ್ರಸ್ಥಾನ ತಮ್ಮದಾಗಿಸಿಕೊಂಡರು. ಮುಖೇಶ್ ಕುಮಾರ್ (282) ಎರಡನೇ ಸ್ಥಾನ ಗಳಿಸಿದರು. ಕೊನೆಯ ಸುತ್ತಿನಲ್ಲಿ ನಿಖರ ಪ್ರದರ್ಶನ ನೀಡಿದ ಅಭಿಷೇಕ್ ಜಾ (284) ಮೂರನೇ ಸ್ಥಾನ ಪಡೆದರು.`ಹಲವು ಸಮಯಗಳಿಂದ ಈ ಮಧುರ ಕ್ಷಣಕ್ಕಾಗಿ ಕಾಯುತ್ತಿದ್ದೆ. ಪ್ರಶಸ್ತಿ ಲಭಿಸಿರುವುದು ಸಂತಸ ನೀಡಿದೆ~ ಎಂದು ಅನುರಾ ಪ್ರತಿಕ್ರಿಯಿಸಿದರು. ಅವರು ಟ್ರೋಫಿಯ ಜೊತೆ ರೂ. 6,46,000 ಮೊತ್ತದ ಚೆಕ್ ಪಡೆದರು.ಬೆಂಗಳೂರಿನ ಯುವ ಪ್ರತಿಭೆ ಎಸ್. ಚಿಕ್ಕರಂಗಪ್ಪ (286) ಅಮೆಚೂರ್ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಒಟ್ಟಾರೆಯಾಗಿ ಅವರು ನಾಲ್ಕನೇ ಸ್ಥಾನ ಪಡೆದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry