ಬುಧವಾರ, ಜೂನ್ 16, 2021
22 °C

ಗಾಲ್ಫ್: ಕೂರ್ಗ್ ಪಬ್ಲಿಕ್ ಸ್ಕೂಲ್‌ಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿರಾಜಪೇಟೆ:  ವಿರಾಜಪೇಟೆ ಬಳಿಯ ಬಿಟ್ಟಂಗಾಲದ ಕೂರ್ಗ್ ಗಾಲ್ಫ್ ಲಿಂಕ್ಸ್ ಈಚೆಗೆ ಹಮ್ಮಿಕೊಂಡಿದ್ದ ಅಂತರ ಶಾಲಾ ಗಾಲ್ಫ್ ಪಂದ್ಯಾವಳಿಯಲ್ಲಿ ಗೋಣಿ ಕೊಪ್ಪಲಿನ ಕೂರ್ಗ್ ಪಬ್ಲಿಕ್ ಸ್ಕೂಲ್ 222 ಪಾಯಿಂಟ್‌ಗಳಿಂದ ಪ್ರಥಮ ಸ್ಥಾನ ಗಳಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.ಅಂತರ ಶಾಲಾ ಗಾಲ್ಫ್  ಪಂದ್ಯಾವಳಿ ಯಲ್ಲಿ ಗೋಣಿಕೊಪ್ಪಲಿನ `ಕಾಲ್ಸ್~ ವಿದ್ಯಾಸಂಸ್ಥೆ ದ್ವಿತೀಯ ಹಾಗೂ ಅರಮೇರಿಯ ಎಸ್.ಎಂ.ಎಸ್. ವಿದ್ಯಾ ಸಂಸ್ಥೆ ತೃತೀಯ ಸ್ಥಾನ ಪಡೆದು ಕೊಂಡಿದೆ. ಕೂರ್ಗ್ ಪಬ್ಲಿಕ್ ಶಾಲೆಯ ಸಾತ್ವಿಕ್ ಮುದ್ದಯ್ಯ ಪ್ರಥಮ ಹಾಗೂ ಅದೇ ಶಾಲೆಯ ನೇಹಲ್ ದ್ವಿತೀಯ ಸ್ಥಾನ ಗಳಿಸಿ ರನ್ನರ್ಸ್‌ ಅಪ್ ಎನಿಸಿಕೊಂಡಿದ್ದಾರೆ.ದಂತ ಮಹಾವಿದ್ಯಾಲಯ ಸಂಸ್ಥೆಯ ಅಧ್ಯಕ್ಷ ಕಂಜಿತಂಡ ಕೆ.ಅಯ್ಯಪ್ಪ ಮಾತನಾಡಿ, ಕ್ರೀಡೆ ಮನಸ್ಸಿಗೆ ಉಲ್ಲಾಸ ದೊಂದಿಗೆ ಮನರಂಜನೆಯನ್ನು ಸಹ ನೀಡುತ್ತದೆ. ವಿದ್ಯಾರ್ಥಿಗಳು ಪಠ್ಯ ದೊಂದಿಗೆ ಕ್ರೀಡೆ ಮೇಲೂ ಆಸಕ್ತಿ ತೋರಬೇಕು ಎಂದರು.ದಂತ ಮಹಾ ವಿದ್ಯಾಲಯ ಸಂಸ್ಥೆಯ ಕಾರ್ಯದರ್ಶಿ ಕೆ.ಎಸ್.ಉತ್ತಯ್ಯ ವಿಜೇತರುಗಳಿಗೆ ಬಹುಮಾನ ವಿತರಿಸಿದರು.ದಂತ ಮಹಾವಿದ್ಯಾಲಯದ ವ್ಯವಸ್ಥಾಪಕ ನಿರ್ದೇಶಕ ಡಾ. ಸುನಿಲ್‌ಮುದ್ದಯ್ಯ ಮಾತನಾಡಿ, ಮುಂದಿನ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಕಿರಿಯ ವಿದ್ಯಾರ್ಥಿಗಳಿಗಾಗಿ ಕೂರ್ಗ್ ಗಾಲ್ಫ್ ಲಿಂಕ್ಸ್ ವತಿಯಿಂದ ಗಾಲ್ಫ್  ಕ್ರೀಡೆಯ ತರಬೇತಿ ಶಿಬಿರ ನಡೆಸಲು ಸಂಸ್ಥೆ ಉದ್ದೇಶಿಸಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.