ಶನಿವಾರ, ಮೇ 8, 2021
26 °C

ಗಾಲ್ಫ್ ಗೆದ್ದವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶೇಷ ಮಕ್ಕಳ ರೌಂಡ್ ಟೇಬಲ್ ಶಾಲೆ ಮಕ್ಕಳ ಸಹಾಯಾರ್ಥ ಕೆ.ಜಿ.ಎ ಗಾಲ್ಫ್ ಕೋರ್ಸ್‌ನಲ್ಲಿ `ಲಾ ಪಲಾಜೋ ರೌಂಡ್ ಟೇಬಲ್ ಇಂಡಿಯಾ ಓಪನ್ 2012~ ಗಾಲ್ಫ್ ಟೂರ್ನಿ ಆಯೋಜಿಸಲಾಗಿತ್ತು.

ಬೆಂಗಳೂರು ಮೆಟ್ರೊಪಾಲಿಟನ್ ರೌಂಡ್ ಟೇಬಲ್ 44ರ ಶಾಲಾ ಕಾರ್ಯಕ್ರಮವಾಗಿ ಆಯೋಜಿಸಿದ್ದ ಈ ಟೂರ್ನಿಯಲ್ಲಿ ನೂರಕ್ಕೂ ಹೆಚ್ಚು ಹವ್ಯಾಸಿ ಗಾಲ್ಫ್  ಆಟಗಾರರು ಪಾಲ್ಗೊಂಡಿದ್ದರು.

ಅಲೋಕ್ ಸಿಂಗ್ (ಪಿ.ಎನ್ ರಾವ್ ಲಾಂಗೆಸ್ಟ್ ಡ್ರೈವ್), ಡಾ.ಸಂಜಯ್ ರಾವ್ (ಪಿ.ಎನ್ ರಾವ್ ಕ್ಲೋಸೆಸ್ಟ್ ಟಿ ಪಿನ್), ಪಂಕಜ್ ಅಡ್ವಾಣಿ (ಪಿ.ಎನ್ ರಾವ್ ಸ್ಟ್ರೇಟೆಸ್ಟ್ ಡ್ರೈವ್), ಅರುಣ್ ಬಜಾಜ್ (ಅಂಗವಿಕಲರ ವಿಭಾಗ 0-9), ಡಿ.ಆದರ್ಶ (10-18), ಡಾ.ಸಂಜಯರಾವ್ (19-36), ಅರುಣಾ ರಾವ್ (ಮಹಿಳಾ ವಿಭಾಗ) ವಿಜೇತರಾದರು.

ಕ್ರಿಕೆಟಿಗ ಸುನೀಲ್ ಜೋಶಿ, ಗಾಲ್ಫ್ ಆಟಗಾರ್ತಿ ಶರ್ಮಿಲಾ ನಿಕೋಲೆ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮೆಟ್ರೊಪಾಲಿಟನ್ ರೌಂಡ್ ಟೇಬಲ್ 44ರ ಚೇರ್‌ಮನ್ ಮನೋಜ್ ಅತ್ತಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.