ಗಾಲ್ಫ್: ಗೌರವ್ ಭಂಡಾರಿಗೆ ಪ್ರಶಸ್ತಿ

7

ಗಾಲ್ಫ್: ಗೌರವ್ ಭಂಡಾರಿಗೆ ಪ್ರಶಸ್ತಿ

Published:
Updated:
ಗಾಲ್ಫ್: ಗೌರವ್ ಭಂಡಾರಿಗೆ ಪ್ರಶಸ್ತಿ

ಮೈಸೂರು: ಬೆಂಗಳೂರಿನ ಗೌರವ್ ಭಂಡಾರಿ ಗುರುವಾರ ಜಯಚಾಮರಾಜೇಂದ್ರ ಒಡೆಯರ್ ಗಾಲ್ಫ್ ಕೋರ್ಸ್‌ನಲ್ಲಿ ಮುಕ್ತಾಯವಾದ `ಜೆಡಬ್ಲ್ಯುಜಿಸಿ ದಕ್ಷಿಣ ವಲಯ ಜೂನಿಯರ್, ಸಬ್‌ಜೂನಿಯರ್ ಮುಕ್ತ ಗಾಲ್ಫ್ ಚಾಂಪಿಯನ್‌ಷಿಪ್-2012ರ ಎ ಮತ್ತು ಬಿ ಕಂಬೈನ್ಡ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.ಎರಡು ದಿನ ನಡೆದ ಟೂರ್ನಿಯಲ್ಲಿ ಒಟ್ಟು 154 ಪಾಯಿಂಟ್ ಸಂಪಾದಿಸಿದ ಗೌರವ್ ಭಂಡಾರಿ ಪ್ರಥಮರಾದರು. ಸೂರ್ಯಕುಮಾರ್ ರನ್ನರ್‌ಅಪ್ ಮತ್ತು ವರುಣ್ ಗಣಪತಿ ಎರಡನೇ ರನ್ನರ್ ಅಪ್ ಆದರು.ಬಿ ಕೆಟಗರಿಯಲ್ಲಿ ಸೂರ್ಯಕುಮಾರ್ ವಿಜೇತರಾದರೆ, ಶ್ರೇಯಸ್ ಚಂದ್ರ ಮತ್ತು ಅಭಿಜಯನ್ ಜೈಸ್ವಾಲ್ ಕ್ರಮವಾಗಿ ರನ್ನರ್ ಮತ್ತು ದ್ವಿತೀಯ ರನ್ನರ್ ಅಪ್ ಪಡೆದರು.  ಸಿ ವಿಭಾಗದಲ್ಲಿ ಹೈದರಾಬಾದಿನ ಹಾರ್ದಿಕ್ ಎಸ್.ಚೌಡಾ ಪ್ರಶಸ್ತಿ ಗೆದ್ದರು.ಮೈಸೂರು ರೇಸ್ ಕ್ಲಬ್ ಚೇರಮನ್ ಮುದ್ದಪ್ಪ ವಿಜೇತರಿಗೆ ಪ್ರಶಸ್ತಿ ವಿತರಿಸಿದರು. ಭಾರತೀಯ ಗಾಲ್ಫ್ ಯೂನಿಯನ್ ಸದಸ್ಯ, ನ್ಯಾಷನಲ್ ಗಾಲ್ಫ್ ಅಕಾಡೆಮಿ ಚೇರಮನ್ ರಯಾನ್ ಇರಾನಿ, ಜೆಡಬ್ಲುಜೆಸಿ ಕಾರ್ಯದರ್ಶಿ ಪರಮಜೀತ್ ಸಿಂಗ್ ಮತ್ತಿತರರು ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry