ಗಾಲ್ಫ್: ನೇಹಾ ತ್ರಿಪಾಠಿ ಚಾಂಪಿಯನ್

7

ಗಾಲ್ಫ್: ನೇಹಾ ತ್ರಿಪಾಠಿ ಚಾಂಪಿಯನ್

Published:
Updated:
ಗಾಲ್ಫ್: ನೇಹಾ ತ್ರಿಪಾಠಿ ಚಾಂಪಿಯನ್

ಬೆಂಗಳೂರು: ಕೋಲ್ಕತ್ತದ ನೇಹಾ ತ್ರಿಪಾಠಿ ಇಲ್ಲಿ ನಡೆದ `ಹೀರೊ ಮೋಟೊ ಕಾರ್ಪ್~ ಮಹಿಳಾ ವೃತ್ತಿಪರ ಗಾಲ್ಫ್ ಚಾಂಪಿಯನ್‌ಷಿಪ್‌ನ ಮೊದಲ ಲೆಗ್‌ನಲ್ಲಿ ಚಾಂಪಿಯನ್ ಆದರು.ಕರ್ನಾಟಕ ಗಾಲ್ಫ್ ಸಂಸ್ಥೆ ಕೋರ್ಸ್‌ನಲ್ಲಿ ಶುಕ್ರವಾರ ಕೊನೆಯ ಸುತ್ತಿನ ಸ್ಪರ್ಧೆಯಲ್ಲಿ ಬೆಂಗಳೂರಿನ ಅದಿತಿ ಅಶೋಕ್ ಅವರನ್ನು ಹಿಂದಿಕ್ಕುವ ಮೂಲಕ ನೇಹಾ ಪ್ರಶಸ್ತಿ ಜಯಿಸಿದರು. 13ರ ಹರೆಯದ ಪ್ರತಿಭೆ ಅದಿತಿ ಅಮೆಚೂರ್ ಸ್ಪರ್ಧಿಗಳ ವಿಭಾಗದಲ್ಲಿ ಅಗ್ರಸ್ಥಾನ ಪಡೆದರು.ಫೋರ್ಟ್ ವಿಲಿಯಮ್ ಆರ್ಮಿ ಗಾಲ್ಫ್ ಕ್ಲಬ್‌ನ ಆಟಗಾರ್ತಿ ನೇಹಾ ಮೂರನೇ ಹಾಗೂ ಕೊನೆಯ ಸುತ್ತಿನಲ್ಲಿ 69 ಅವಕಾಶಗಳಲ್ಲಿ ಸ್ಪರ್ಧೆ ಕೊನೆಗೊಳಿಸಿದರು.ಮೊದಲ ಎರಡು ಸುತ್ತುಗಳಲ್ಲಿ ಮುನ್ನಡೆ ಪಡೆದಿದ್ದ ಅದಿತಿ 72 ಸ್ಟ್ರೋಕ್‌ಗಳನ್ನು ಬಳಸಿಕೊಂಡರು. ಇದರಿಂದ ಇಬ್ಬರೂ ಒಟ್ಟಾರೆ 218 ಸ್ಟ್ರೋಕ್‌ಗಳೊಂದಿಗೆ ಸಮಬಲ ಸಾಧಿಸಿದರು.ಆ ಬಳಿಕ ಪ್ಲೇ ಆಫ್‌ನಲ್ಲಿ ನೇಹಾ ಎದುರಾಳಿಯನ್ನು ಹಿಂದಿಕ್ಕಿ ಚಾಂಪಿಯನ್ ಆದರು. `ಚಾಂಪಿಯನ್ ಆಗಿರುವುದು ಸಂತಸ ನೀಡಿದೆ. ಮಾತ್ರವಲ್ಲ ಇಲ್ಲಿ ನಡೆಯಲಿರುವ ಇನ್ನೆರಡು ಟೂರ್ನಿಗಳಲ್ಲಿ ಆತ್ಮವಿಶ್ವಾಸದೊಂದಿಗೆ ಪಾಲ್ಗೊಳ್ಳಬಹುದು~ ಎಂದು ಕೋಲ್ಕತ್ತದ ಸೇಂಟ್ ಕ್ಸೇವಿಯರ್ಸ್ ಕಾಲೇಜಿನ ವಿದ್ಯಾರ್ಥಿನಿ ನೇಹಾ ಪ್ರತಿಕ್ರಿಯಿಸಿದರು.ಅದಿತಿ ಅವರು ಅಮೆಚೂರ್ ಸ್ಪರ್ಧಿಯಾಗಿರುವ ಕಾರಣ ಸ್ಮೃತಿ ಮೆಹ್ರಾ ಮತ್ತು ಶರ್ಮಿಳಾ ನಿಕೋಲೆಟ್ (ತಲಾ 219) ಜಂಟಿ ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು.ಸ್ಮೃತಿ ಕೊನೆಯ ಸುತ್ತಿನಲ್ಲಿ (68) ಅಮೋಘ ಪ್ರದರ್ಶನ ನೀಡಿದರು. ಆದರೆ ಮೊದಲ ಎರಡು ಸುತ್ತುಗಳಲ್ಲಿ (75, 76) ಅವರು ಅಷ್ಟ್ರೊಂದು ಪ್ರಭಾವಿ ಎನಿಸಿರಲಿಲ್ಲ. ಇದರಿಂದ ಪ್ರಶಸ್ತಿ ಗೆಲ್ಲುವ ಅವಕಾಶ ಕಳೆದುಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry